ಪರೀಕ್ಷೆಯಲ್ಲಿ ಪಾಸ್ ಮಾಡಲು ವಿದ್ಯಾರ್ಥಿಗಳು ನಾನಾ ರೀತಿಯ ಬರಹಗಳನ್ನು ಬರೆಯುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಚಿತ್ರವಾಗಿ ಬೇಡಿಕೆ ಇಟ್ಟಿದ್ದಾನೆ.
ಉತ್ತರ ಪತ್ರಿಕೆಯನ್ನು ತಿದ್ದುವವರನ್ನೇ ಬ್ಲಾಕ್‌ಮೇಲ್ ಮಾಡಿದ್ದು, ಸದ್ಯ ಈ ಉತ್ತರಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ, “ಸರ್/ಮೇಡಂ, ನಾನು ನನಗೆ ತಿಳಿದಷ್ಟು ಮಾಡಿದ್ದೇನೆ,
ಈಗ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ ದಯವಿಟ್ಟು ನನ್ನನ್ನು ಪಾಸ್ ಮಾಡಿ, ನಾನು ಪಾಸ್ ಆಗದಿದ್ದರೆ ನಮ್ಮ ಇಡೀ ಕುಟು೦ಬ ಸಾಯುತ್ತದೆ. ಸತ್ತ
ನಂತರ ನಾವು ದೆವ್ವಗಳಾಗಿ ನಿಮ್ಮೆಲ್ಲರನ್ನು ಹೆದರಿಸಿ ಬೆದರಿಸುತ್ತೇವೆ. ನನ್ನನ್ನು ಪಾಸ್ ಮಾಡದೇ ಇದ್ದರೆ ನಿಮಗೆ ಡೆಂಘಿ ಬರುತ್ತದೆ” ಎಂದೆಲ್ಲಾ ಬರೆದಿದ್ದಾನೆ.
ಈ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವ ಶಿಕ್ಷಕರು ಅದರ ಮೇಲೆ ಕೆಂಪು ರೇಖೆಯನ್ನು ಎಳೆದಿದ್ದಾರೆ. ಇನ್ನು ಉತ್ತರ ಪ್ರತಿ ವೈರಲ್ ಆಗುತ್ತಿದ್ದಂತೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಭಾರೀ ಚರ್ಚೆ
ನಡೆಯುತ್ತಿದ್ದು, ಉತ್ತರಗಳ ಬದಲು ಅವರು ನೆಪ ಮತ್ತು ಶಾಪಗಳನ್ನು ಬರೆಯುತ್ತಿದ್ದಾರೆಯೇ ಎಂಬ ಪ್ರಶ್ನೆ
ಉದ್ಭವಿಸಿದೆ.