ಹಾಡಹಗಲೆ ನಡು ರಸ್ತೆಯಲ್ಲಿ ಮಾರುತಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ನೋಡ ನೋಡುತ್ತಲೇ ಬೆಂಕಿಯು ಕಾರನ್ನ ಸಂಪೂರ್ಣ ಆವರಿಸಿಕೊಂಡ ಹಿನ್ನೆಲೆ ಕಾರಿನಿಂದ ಇಳಿದು ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಕಾರಿನ ಚಾಲಕ ಸುಟ್ಟು ಕರಕಲಾಗಿರುವ ಘಟನೆ ನೆಲಮಂಗಲದ ಟೋಲ್ ಬಳಿ ಇರುವ ಪಾರ್ಲೆಜಿ ಬಳಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಕಾರಿನಲ್ಲೇ ಸುಟ್ಟು ಹೋಗಿದ್ದ ಕಾರಿನ ಚಾಲಕನ ಮೃತ ದೇಹವನ್ನ ಹೊರ ತೆಗೆಯಲಾಯಿತು.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಮಾಡಿದ್ದಾರೆ.