ಬೆಳಿಗ್ಗೆ ಅಥವಾ ರಾತ್ರಿಯಲ್ಲಿ ನಿಯಮಿತವಾಗಿ ವಾಕ್ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ರಾತ್ರಿಯ ನಡಿಗೆಗಳು ಬೆಳಗಿನ ನಡಿಗೆಗಿಂತ ಹೆಚ್ಚು ಪ್ರಯೋಜನ ಹೊಂದಿವೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದಲ್ಲಿ ಭಾನುವಾರ ಆರ್ಯವೈಶ್ಯ ಯುವಜನ ಸಂಘ ಹಾಗೂ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ 4ಕೆ ವಾಕಾಥಾನ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾತ್ರಿಯ ಊಟದ ನಂತರ 15 ನಿಮಿಷಗಳ ನಡಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೊಬೈಲ್ ಗೀಳಿನಿಂದ ಮಕ್ಕಳು ನಡಿಗೆ, ಕ್ರೀಡಾ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ನಡಿಗೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಹೇಳಿದರು.
ಬೆಳ್ಳಂ ಬೆಳಿಗ್ಗೆ ಮಹಿಳೆಯರು ಮಕ್ಕಳು ಹಿರಿಯ ನಾಗರಿಕರು ನಾಲ್ಕು ಕಿಲೋ ಮೀಟರ್ ಗಳ ಕಾಲ್ನಡಿಗೆ ಯಲ್ಲಿ ಭಾಗವಹಿಸಿದ್ದರು. ನಡಿಗೆಗಾಗಿ ಆರೋಗ್ಯ ಆರೋಗ್ಯಕ್ಕಾಗಿ ನಡಿಗೆ ಘೋಷವಾಕ್ಯದೋಂದಿಗೆ ನಗರದ ವಾಸವಿ ಕಲ್ಯಾಣ ಮಂಟಪದಿಂದ ನಾಲ್ಕು ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ಅರಂಭಗೊಂಡು ಕೋರ್ಟ್ ರಸ್ತೆ, ಬಸವ ಭವನ, ತಾಲೂಕು ಕಚೇರಿ ರಸ್ತೆ ಮೂಲಕ ಸಾಗಿ ವಾಸವಿ ಕಲ್ಯಾಣ ಮಂಟಪದ ಬಳಿ ಸಮಾಪ್ತಿಗೊಂಡಿತು.
ಜಾಥಾದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ, ಪದಕಗಳನ್ನು ಶಾಸಕ ಧೀರಜ್ ಮುನಿರಾಜು ವಿತರಿಸಿದರು.
ಈ ವೇಳೆ ಸಂಘದ ರಾಜ್ಯ ಘಟಕದ ನಿರ್ದೇಶಕ ಅಮರನಾಥ ಸುಂಕು, ರಘುನಂದನ್ ಕೆಪಿ ಮಹಿಳಾ ಘಟಕದ ಪೂಜಾಸುಮಂತ್, ಕವಿತ ರಾಜಶೇಖರ,
ಮತ್ತಿತರರು ಇದ್ದರು