ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ, ಬೇಕರಿ ರಘುಗೆ (ಸೆ.20ರವರೆಗೆ) 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ದೊಡ್ಡಬಳ್ಳಾಪುರದ ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನಟ ಪ್ರಥಮ್ ಸೆ.6ರಂದು ಮತ್ತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಯಶಸ್ವಿನಿಗೌಡ ಹಾಗೂ ಬೇಕರಿ ರಘು ಸಾಮಾಜಿಕ ಜಾಲತಾಣದಲ್ಲಿ ನನಗೆ ಅವಹೇಳನ, ಜೀವ ಬೆದರಿಕೆ ಸಂದೇಶ, ಅವಾಚ್ಯ ಶಬ್ಧಗಳಿಂದ ನಿಂದನೆ, ಫೊನ್ ಕರೆಗಳನ್ನು ಮಾಡಿ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ನಟ ಪ್ರಥಮ್ ದೂರಿನ ಮೇರೆಗೆ ಯಶಸ್ವಿನಿಗೌಡ ಹಾಗೂ ಬೇಕರಿ ರಘು ವಿರುದ್ಧ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು.

ಎನ್ ಸಿ ಆರ್ ದಾಖಲು ಮಾಡಿದ ನಂತರ ಸೆ.8 ರಂದು ಜಾಮೀನು ರದ್ದತಿಗಾಗಿ ಕೋರ್ಟ್ ಗೆ ಪೊಲೀಸ್ ಠಾಣೆ ಮನವಿ ಮಾಡಲಾಗಿತ್ತು. ಠಾಣೆಯ ಮನವಿ ಮೇರೆಗೆ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಸಿಲಾಗಿತ್ತು. ಇಂದು ವಿಚಾರಣೆ ಹಾಗೂ ಜಾಮೀನುಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿಗಳಾದ ಯಶಸ್ವಿನಿಗೌಡ ಹಾಗೂ ಬೇಕರಿ ರಘುನನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಸೆ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶ ಮಾಡಿದೆ. ನ್ಯಾಯಾಧೀಶರ ಸೂಚನೆಯಂತೆ ವಶಕ್ಕೆ ಪಡೆದ ಪೊಲೀಸರು ಜೈಲಿಗಟ್ಟಿದ್ದಾರೆ.

ವಿಷಯ ತಿಳಿದ ನಟ ಪ್ರಥಮ್ ಫೋನ್ ಕರೆ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿ, ಇದು ಸತ್ಯಕ್ಕೆ ಸಿಕ್ಕ ಜಯ. ನಾನು ಏನನ್ನು ಸುಳ್ಳು ಹೇಳಿಲ್ಲ. ಸತ್ಯವನ್ನೇ ಬಿಚ್ಚಿಟ್ಟಿದ್ದೇನೆ. ನಾನು ಯಾರಿಗೂ ಏನು ಮಾಡಿಲ್ಲ ಎಂದು ಹೇಳಿದ್ದಾರೆ…

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..

Leave a Reply

Your email address will not be published. Required fields are marked *

error: Content is protected !!