ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರೇಣುಕಾ ಯಲ್ಲಮ್ಮ ದೇವಾಲಯದ ಬಳಿ ಕರೆ ತಂದ ಪೊಲೀಸರು. ಘಟನಾ ಸ್ಥಳಕ್ಕೆ ಸ್ಥಳ ಮಹಜರಿಗೆಂದು ಪ್ರಥಮ್ ನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಕರೆದೊಯ್ದು ಘಟನೆ ಬಗ್ಗೆ ಇಂಚಿಂಚು ಮಾಹಿತಿ ಕಲೆಹಾಕಿದರು.
ಜು.22ರಂದು ನಡೆದ ಘಟನೆ ಬಗ್ಗೆ ಯಾರು, ಹೇಗೆ ಬೈಗುಳ, ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ಪ್ರಥಮ್ ಮಾಹಿತಿ ನೀಡಿದರು.