ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ಕೋರ್ಟ್ ಗೆ ಶರಣಾಗಲು ಆಗಮಿಸಿದ್ದಾರೆ.
ದೊಡ್ಡಬಳ್ಳಾಪುರದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶರಣಾಗತಿಯಾಗಿದ್ದಾರೆ.
ಯಶಸ್ವಿನಿ, ಬೇಕರಿ ರಘು ಮೇಲೆ ನಟ ಪ್ರತಾಪ್ ದೂರು ಹಿನ್ನೆಲೆ ಜಾಮೀನು ಪಡೆಯಲು ಕೋರ್ಟ್ ಮೊರೆಹೋಗಿದ್ದಾರೆ.
ನಿನ್ನೆಯಷ್ಟೇ ಡ್ರ್ಯಾಗನ್ ನಿಂದ ಚುಚ್ಚಲು ಬಂದಿದ್ದರು ಎಂದು ದೂರು ನೀಡಲಾಗಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ಹಿನ್ನೆಲೆ ಬೇಲ್ ಪಡೆಯಲು ಯಶಸ್ವಿನಿ ಹಾಗೂ ಬೇಕರಿ ರಘು ಕೋರ್ಟ್ ಗೆ ಹಾಜರಾಗಿದ್ದಾರೆ.
ತಮ್ಮ ವಕೀಲರ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆರೋಪಿಗಳು ಕೋರ್ಟ್ ಗೆ ಶರಣಾಗುವ ಮಾಹಿತಿ ತಿಳಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಆರೋಪಿಗಳನ್ನು ಬಂಧಿಸುವ ಯತ್ನ ನಡೆಸಿದರು. ಪೊಲೀಸರ ಕಣ್ಣುತಪ್ಪಿಸಿ ಕೋರ್ಟ್ ಒಳಗೆ ಹೊರಟಿದ್ದಾರೆ.
ಬೇಲ್ ಗೆ ಅರ್ಜಿ ಹಾಕಿದ್ದು, ಮಧ್ಯಾಹ್ನ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಮಧ್ಯಹ್ನಾ ನಂತರ ಜಾಮೀನು ಸಿಗುವುದಾಗಿ ತಿಳಿದುಬಂದಿದೆ….
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಯಶಸ್ವಿನಿ, ಪ್ರಥಮ್ ನ ಬಿಡೋ ಮಾತೇ ಇಲ್ಲ, ನಾನಂತೂ ಬಿಡೋ ಅಂತ ಮಗಳೇ ಅಲ್ಲ. ನಾನು ಸಹ ಪ್ರಥಮ್ ಮೇಲೆ ಪ್ರತಿದೂರು ದಾಖಲಿಸುತ್ತೇನೆ ಮಾನ ನಷ್ಟ ಮೊಖದ್ದಮೆ ಹೂಡುತ್ತೇನೆ. ನನ್ನಿಂದ ದರ್ಶನ್ ಅವರಿಗೆ ಏನಾಗಬೇಕು ಅವರಿಂದ ನನಗೆ ಏನಾಗಬೇಕು ಎಂದು ನ್ಯಾಯಾಲಯದ ಎದುರು ಅಬ್ಬರಿಸಿದ ಆರೋಪಿತೆ ಯಶಸ್ವಿನಿ.