ಜೂನ್ 16ರ ಬೆಳಗ್ಗೆ 11 ಗಂಟೆಗೆ ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಸಮೀಪ ನಟ ಅಭಿಷೇಕ್-ಅವಿವಾ ಬೀಗರ ಊಟವನ್ನು ಏರ್ಪಡಿಸಲಾಗಿದೆ. ಬೀಗರ ಊಟಕ್ಕೆಂದು 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಸಿದ್ಧತೆ ನಡೆದಿದೆ. ಬೀಗರ ಊಟಕ್ಕೆ 50 ಸಾವಿರಕ್ಕಿಂತ ಹೆಚ್ಚು ಜನರು ಬರುವ ನಿರೀಕ್ಷೆಯು ಸಹ ಇದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಬೀಗರ ಔತಣ ಕೂಟದ ಸಂಪೂರ್ಣ ಜವಾಬ್ಧಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಮಂಡ್ಯದ ಸ್ಥಳೀಯ ಬಾಣಸಿಗರಿಗೆ ಅಡುಗೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗಿದೆ.
ಬೀಗರೂಟದ ಮೆನು ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಇರಲಿದೆ.
ಪಕ್ಕಾ ನಾಟಿ ಸ್ಟೈಲ್ ನಲ್ಲಿ ಬೀಗರೂಟ ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ. ಆ ದಿನ ಅಭಿ ಹಾಗೂ ಅವಿವಾ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕನ್ನಡ ಚಿತ್ರರಂಗದ ಕೆಲ ತಾರೆಯರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.