ನಗು ವರ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ 28 ವರ್ಷದ ಲಕ್ಷ್ಮಿನಾರಾಯಣ ವಿಂಜಮ್ ಸಾವನ್ನಪ್ಪಿರುವ ವ್ಯಕ್ತಿ. ಲಕ್ಷ್ಮಿನಾರಾಯಣ ವಿಂಜಮ್ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಹಸೆಮಣೆ ಏರಲು ವಾರವಷ್ಟೇ ಬಾಕಿ ಇತ್ತು. ಹೀಗಿರುವಾಗ, ಮದುವೆಗೆ ಮುಂಚಿತವಾಗಿ ತನ್ನ ಮುಖದ ನಗುವನ್ನು ಹೆಚ್ಚಿಸುವ ಶಸ್ತ್ರ ಚಿಕಿತ್ಸೆಗೆ ದಂತ ಚಿಕಿತ್ಸಾಲಯಕ್ಕೆ ದಾಖಲಾದ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ನೀಡಿದ ಅನಸ್ತೇಸಿಯಾ ಓವರ್‌ಡೋಸ್‌ನಿಂದ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಲಕ್ಷ್ಮಿನಾರಾಯಣ ವಿಂಜಮ್ ಅವರ ತಂದೆ ರಾಮುಲು ವಿಂಜಂ ಆರೋಪಿಸಿದ್ದಾರೆ.