ನಗರಸಭೆಯಲ್ಲಿ ಸಂಕ್ರಾತಿ ಸಂಭ್ರಮ: ನಗರಸಭೆ ಅಧ್ಯಕ್ಷರು‌‌ ಸೇರಿದಂತೆ ಎಲ್ಲಾ ಸದಸ್ಯರು ಸಂಕ್ರಾಂತಿ ಸಂಭ್ರಮದಲ್ಲಿ‌ ಭಾಗಿ: ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭ ಕೋರಿದರು

ಮಕರ ಸಂಕ್ರಾಂತಿ ಹಬ್ಬ ಹಿಂದೂಗಳಿಗೆ ಹೆಚ್ಚು ವಿಶೇಷ. ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭವನ್ನು ಹಾರೈಸುವ ಹಬ್ಬ ಇದಾಗಿದೆ. ಈ ದಿನದಿಂದ ಸೂರ್ಯ ದೇವನು ಉತ್ತರಾಯಣದತ್ತ ಸಂಚಾರವನ್ನು ಪ್ರಾರಂಭಿಸುತ್ತಾನೆ. ಭಾರತ ದೇಶದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಗಳಿಗೂ ಕೂಡ ತನ್ನದೇ ಆದ ಮಹತ್ವವಿದೆ. ರೈತಾಪಿ ಜನರು ಪ್ರತಿವರ್ಷ ಆಚರಿಸುವ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬ ಅತ್ಯಂತ ಮಹತ್ವದ ಹಬ್ಬವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ರೈತರು ಸುಗ್ಗಿ ಹಬ್ಬವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.

ಈ ಹಿನ್ನೆಲೆ ಇಂದು ಒಂದು ದಿನ ಮುಂಚೆಯೇ ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು, ಸೇರಿದಂತೆ ಎಲ್ಲಾ ಸದಸ್ಯರು, ಅಧಿಕಾರಿ ವರ್ಗ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷದಿಂದ ಹಬ್ಬ ಆಚರಣೆ ಮಾಡಿದರು.

ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಯಿತು. ನಂತರ ಗೋಪೂಜೆ ಮಾಡಲಾಯಿತು. ನಂತರ ಎಳ್ಳು – ಬೆಲ್ಲ ಹಂಚಿ ಪರಸ್ಪರ ಹಬ್ಬದ ಶುಭವನ್ನು ಕೋರಲಾಯಿತು.

Leave a Reply

Your email address will not be published. Required fields are marked *

error: Content is protected !!