ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಸಿಸಿ ಕ್ಯಾಮೆರಾ, ಕ್ರೀಡಾ ವಸ್ತುಗಳ ಕಳ್ಳತನ

ನಾಲ್ಕು ಸಿಸಿ ಕ್ಯಾಮೆರಾ, ಕ್ರೀಡಾ ಕೊಠಡಿಯಲ್ಲಿದ್ದ ಕ್ರೀಡಾ ಸಾಮಾಗ್ರಿಗಳನ್ನು ಕದ್ದೋಯ್ದ ಘಟನೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ನವೆಂಬರ್ 17ರಂದು ನಡೆದಿದೆ.

ಒಂದು ಸಿಸಿ ಕ್ಯಾಮೆರಾ ಒಡೆದು ಹಾಕಿ, ಕ್ರೀಡಾ ಕೊಠಡಿಯ ಬೀಗ ಮುರಿದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸರಬರಾಜುಗೊಂಡಿದ್ದ ಥ್ರೋಬಾಲ್, 5ವಾಲಿಬಾಲ್, 6 ಶಟಲ್ ರಾಕೆಟ್, 6 ಬಾಲ್ ಬ್ಯಾಡ್ಮಿಂಟನ್ ರಾಕೆಟ್, 12 ಹ್ಯಾಂಡ್ ಬಾಲ್, 6‌ಫು ಟ್ ಬಾಲ್, 50 ಸ್ಕಿಪ್ಪಿಂಗ್ ರೋಪ್, 50ಟೆನ್ನಿಸ್ ಕಾಟ್, 3 ಸೈಡ್ ಡ್ರಮ್ಸ್, 1ಬೇಸ್ ಡ್ರಮ್, 4 ಕಬ್ಬಿಣದ ಪೋಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಕಳ್ಳರು.

ಉಪ ಪ್ರಾಂಶುಪಾಲರ ಕೊಠಡಿಯ ಬೀಗವನ್ನು ಒಡೆಯುವ ಯತ್ನ ಮಾಡಿರುವ ಕಳ್ಳರು, ಶಿಕ್ಷಕರ ಕೊಠಡಿಯಲ್ಲಿ ಕಬೋರ್ಡ್ ಗಳನ್ನು ತೆಗೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಿನೇದಿನೇ ಕಳ್ಳರ ಉಪಟಳ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಇತ್ತ ಗಮನಹರಿಸುವ ಕಾರ್ಯ ಮಾಡಬೇಕು.

Leave a Reply

Your email address will not be published. Required fields are marked *