ಡಿ.24ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ದರ್ಗಾಕ್ಕೆ ಹೋಗಿ ಬರುವುದಾಗಿ ಹೇಳಿ ನಗರದ ಮುತ್ತೂರುಕೆರೆಗೆ ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ.
80 ವರ್ಷದ ವೃದ್ಧೆ ಜುಲೇಖಾಬಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ, ಮೃತ ವೃದ್ಧೆ ಮುತ್ತೂರು ಗ್ರಾಮದ ನಿವಾಸಿಯಾಗಿದ್ದು, ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ದರ್ಗಾಕ್ಕೆ ಹೋಗುವುದಾಗಿ ಹೇಳಿ ಹೊರಗೆ ಬಂದಿದ್ದರು, ಅನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಡಿ.24ರಂದು ಮೃತ ಕುಟುಂಬಸ್ಥರು ಎಷ್ಟು ಹುಡುಕಿದರೂ ಪತ್ತೆಯಾಗದ ವೃದ್ಧೆ ಡಿ.26ರಂದು ಮುತ್ತೂರು ಗ್ರಾಮದ ನಿವಾಸಿಗೆ ಕೆರೆಯಲ್ಲಿ ತೆಲುತ್ತಿರುವ ಶವ ಕಾಣಿಸಿದೆ. ನಂತರ ಈ ಕುರಿತು ಕೂಡಲೇ ಮೃತಳ ಕುಟುಬಂಸ್ಥರಿಗೆ ಮಾಹಿತಿ ನೀಡಲಾಗಿದೆ.
ಕುಡಿತದ ಚಟ ಇದ್ದ ಮಹಿಳೆ ಕುಡಿದ ನಶೆಯಲ್ಲಿ ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.