ನಗರದ ಬಿಜೆಪಿ ಕಚೇರಿಯೊಳಗೆ ದಲಿತ ಜನಪ್ರತಿನಿಧಿ ಮೇಲೆ ಹಲ್ಲೆ; ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮಕ್ಕೆ ಜನ ಸೇರದಿದಕ್ಕೆ ಬಿಜೆಪಿಯ ಮುಖಂಡರು ಪಕ್ಷದ ಕಚೇರಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು, ಈ ವೇಳೆ ದಲಿತ ಸಮುದಾಯದ ನಗರಸಭಾ ಸದಸ್ಯ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ ಇದನ್ನು ವಿರೋಧಿಸಿದ ಕೆಲ ಬಿಜೆಪಿಯ ಮುಖಂಡರು ಜಾತಿ ನಿಂದನೆ ಮಾಡಿದಲ್ಲದೆ ಅವರ ಅಂಗಿ ಹರಿದು ಹಾಕಿದ್ದಲ್ಲದೆ, ಕಾಲಿನ ಒದ್ದು ಜೀವ ಬೆದರಿಕೆಯನ್ನ ಹಾಕಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಆರ್.ಶಿವಣ್ಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೊಡ್ಡಬಳ್ಳಾಪುರ ನಗರಸಭಾ ಸದಸ್ಯರಾದ ಆರ್.ಶಿವಣ್ಣ ಹಲ್ಲೆಗೊಳಗಾದವರು, ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವಾಗ ಬಿಜೆಪಿಯ ಮುಖಂಡರಾದ ಬಿ.ಜಿ.ಶ್ರೀನಿವಾಸ್, ಆನಂದ ಮೂರ್ತಿ, ಮಧು ಬೇಗಲಿ ಮತ್ತು ನಾಗೇಶ್ ಎಂಬುವವರು ಹಲ್ಲೆ ನಡೆಸಿದ್ದಾರೆ, ಹಲ್ಲೆ ನಡೆಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ :

ಜನವರಿ 23 ರಂದು ತಾಲ್ಲೂಕಿನ ಮಧುರೆಗೆ ಕೇಂದ್ರದ ರಾಜ್ಯ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ್ದರು, ಆದರೆ ಈ ಬಗ್ಗೆ ನಗರದ ಮುಖಂಡರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಸೇರಿರಲಿಲ್ಲ.

ಈ ವಿಚಾರವನ್ನು ತಾಲ್ಲೂಕು ಅಧ್ಯಕ್ಷ ಅಥವಾ ನಗರ ಅಧ್ಯಕ್ಷರಾದವರು ಮುಖಂಡರಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ, ಇದ್ಯಾವುದೂ ಆಗದೇ ಇರುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯವನ್ನು ಶಿವಣ್ಣ ಹೇಳಿದ್ದಾರೆ, ಶಿವಣ್ಣ ಮಾತಿನಿಂದ ಕೋಪಗೊಂಡ ಅವರು ಜಾತಿ ನಿಂದನೆ ಮಾಡಿದ್ದಾರೆ, ಸಭೆಗೆ ನಿನ್ನನ್ನು ಸೇರಿಸುವುದೇ ಹೆಚ್ಚು ಎಂದು ಬಿ.ಜಿ.ಶ್ರೀನಿವಾಸ್ , ಮಧು ಬೇಗಲಿ, ನಾಗೇಶ್ ಮತ್ತು ಆನಂದಮೂರ್ತಿ ಎಂಬಾತ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ, ಜಾತಿ ನಿಂದನೆ ಮಾಡಿ, ಅಂಗಿಯನ್ನು ಹರಿದುಹಾಕಿ, ಒಡೆದಿದ್ದಾರೆ ಎಂದು ಹಲ್ಲೆಗೊಳಗಾದ ಶಿವಣ್ಣ ಆರೋಪ ಮಾಡಿದ್ದಾರೆ.

ಈ ಕುರಿತು ಪಕ್ಷದ ತಾಲೂಕು ಹಾಗೂ ಜಿಲ್ಲಾ ಹಿರಿಯ ಮುಖಂಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ‌‌.ಕೆ.ಸುಧಾಕರ್ ಅವರಿಗೆ ದೂರು ನೀಡಲಾಗಿದೆ ಎಂದು ಹಲ್ಲೆಗೊಳಗಾದ ಶಿವಣ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *