ನಗರದ ಪಿ.ಸಿ ಬಡಾವಣೆಯ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೋಲಾರ: ನಗರದ ಪಿ.ಸಿ ಬಡಾವಣೆಯ ಮಿನಿ ಹೋಟೆಲ್ ವೃತ್ತದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆಟೋ ನಿಲ್ದಾಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ ಮಂಜುನಾಥ್ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಆಟೋಚಾಲಕರೇ ನಿತ್ಯ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡಿಗರು ತಮ್ಮ ಸಾರ್ವಜನಿಕ ಸೇವೆಯ ಆಟೋದಲ್ಲಿ ಕನ್ನಡ ಸಾಹಿತ್ಯದ ಬರಹದ ಸಾಲುಗಳು, ಸಾಹಿತಿಗಳು, ಚಿತ್ರನಟರ ಭಾವಚಿತ್ರಗಳು ನೋಡುಗರನ್ನು ಸೆಳೆಯುವಂತೆ ಮಾಡಿರುತ್ತಾರೆ. ಆ ಮೂಲಕ ಸಾಮಾಜಿಕ ಪರಿವರ್ತಣೆಯಲ್ಲಿ ಹಾಗೂ ಜನರಲ್ಲಿ ಕನ್ನಡ ಪ್ರೇಮ ಹೆಚ್ಚಿಸುವ ಕೆಲಸವನ್ನು ಆಟೋ ಚಾಲಕರು ಸಮರ್ಥವಾಗಿ ಮಾಡುತ್ತಿದ್ದಾರೆ. ಅವರಲ್ಲಿನ ಕನ್ನಡತನವನ್ನು ನಾವು ಗುರುತಿಸಿ ಅಭಿನಂದಿಸಬೇಕು, ಕನ್ನಡ ಉಳಿವು ಮತ್ತು ಬೆಳೆವಣಿಗೆಯಲ್ಲಿ ಆಟೋ ಚಾಲಕರ ಪಾತ್ರ ಅಪಾರವಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ಕನ್ನಡ ರಾಜ್ಯೋತ್ಸವವು ನಿತ್ಯೋತ್ಸವವಾಗಬೇಕು. ಕನ್ನಡ ನಾಡನ್ನು ಆಳಿದ ಅನೇಕ ರಾಜರು ನಾಡಿಗಾಗಿ ಕೆಲಸ ಮಾಡಿದ್ದಾರೆ ನಾವು ಎಲ್ಲರೂ ಕನ್ನಡ ಭಾಷೆಗೆ ಧಕ್ಕೆಯಾಗದಂತೆ ಸಂಕಲ್ಪ ಮಾಡೋಣ ನಾಡಿಗೆ ಬರುವ ಅನ್ಯಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು ರಾಜ್ಯದಲ್ಲಿ ಲಕ್ಷಾಂತರ ಆಟೋ ಚಾಲಕರು ಸ್ವಾವಲಂಬನೆಯಿಂದ ದುಡಿಯುತ್ತಾ ಸಾರ್ವಜನಿಕರ ಸೇವಾಕ್ಷೇತ್ರದಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ ಎಂದರು.

ನಿಲ್ದಾಣದಲ್ಲಿನ ಚಾಲಕರು ತಮ್ಮ ಆಟೋಗಳನ್ನು ಹೂವು ಮತ್ತು ಕನ್ನಡದ ಬಾವುಟಗಳೊಂದಿಗೆ ಸಿಂಗರಿಸಿ ಮೆರವಣಿಗೆ ಮಾಡಿ ಕನ್ನಡ ಪ್ರೇಮ ಮೆರೆದರು. ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು ಸಂಘದ ಅಧ್ಯಕ್ಷ ಶ್ರೀನಿವಾಸ್, ಆಟೋ ಚಾಲಕರಾದ ಬಾಲಯ್ಯ, ಜಗದೀಶ್, ಶೇಖರ್, ನಾಗೇಶ್, ಪುನೀತ್, ಧರ್ಮ, ಸೋಮಣ್ಣ, ರಾಜಣ್ಣ ಮುಂತಾದವರು ಇದ್ದರು.

Leave a Reply

Your email address will not be published. Required fields are marked *