ನಗರದ ತಾಲೂಕು ಕಚೇರಿ, ಮೆಟ್ರಿಕ್ ಪೂರ್ವ ಬಾಲಕಿಯರ, ಬಾಲಕರ ವಿದ್ಯಾರ್ಥಿ ನಿಲಯ, ಸಾರ್ವಜನಿಕ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ- ಪರಿಶೀಲನೆ

ನಗರದ ತಾಲೂಕು ಕಚೇರಿ, ಮೆಟ್ರಿಕ್ ಪೂರ್ವ ಬಾಲಕಿಯರು ಹಾಗೂ ಬಾಲಕರ ವಿದ್ಯಾರ್ಥಿ ನಿಲಯ, ಸಾರ್ವಜನಿಕ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ.ವೀರಪ್ಪನವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್‌ ಸೇರಿದಂತೆ ಎಲ್ಲಾ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ತಳ ಮಟ್ಟದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂದು ಎಚ್ಚರಿಸಿದರು.

ಸರ್ವೇ ಆಫೀಸ್ ನಲ್ಲಿ 26 ಸಿಬ್ಬಂದಿಯಲ್ಲಿ ಇಬ್ಬರು ಮಾತ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಿಕ್ಕುಳಿದ ಸಿಬ್ಬಂದಿ ಎಲ್ಲಿ ಎಂದು ಗರಂ ಆದರು.

ನಂತರ ಮೆಟ್ರಿಕ್ ಪೂರ್ವ ಬಾಲಕಿಯರ, ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು ಹಾಸ್ಟೆಲ್ ವಿದ್ಯಾರ್ಥಿಗಳ ಜೊತೆ ಕೆಲಕಾಲ ಸಂವಾದ ನಡೆಸಿದರು. ಕೆಲ‌ ಪ್ರಶ್ನೆಗಳನ್ನು ಹಾಕಿ ವಿದ್ಯಾರ್ಥಿಗಳ ಬಳಿ ಉತ್ತರ ಪಡೆದರು.

ಬೆಳಗ್ಗೆ ಮಕ್ಕಳು ತಣ್ಣೀರಿನ ಸ್ನಾನ ಮಾಡಬಾರದು, ಬಿಸಿ‌ ನೀರಿನ ವ್ಯವಸ್ಥೆ ಮಾಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಎಲ್ಲಾ‌ ಅಧಿಕಾರಿಗಳು ಬೆಳಗ್ಗೆ ಕಚೇರಿಗೆ ಬಂದ‌ ಕೂಡಲೇ ತಮ್ಮ ಜೇಬಿನಲ್ಲಿ ಎಷ್ಟು ಹಣ ಇದೆ ಎಂದು ರಿಜಿಸ್ಟರ್ ಬುಕ್ ನಲ್ಲಿ ನಮೂದಿಸಬೇಕು. ತದನಂರ ಸಂಜೆ ಕೆಲಸ ಮುಗಿದ ಬಳಿಕ ಎಷ್ಟು ಹಣ ತಮ್ಮಲ್ಲಿದೆ ಎಂದು ನಮೂದಿಸಿ ಹೋಗಬೇಕು. ಒಂದು ವೇಳೆ ಹೆಚ್ಚು ಹಣ ಇದ್ದರೆ ಕಾರಣ ತಿಳಿಸಬೇಕು ಎಂದರು.

ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ‌ ನೀಡಿ ರೋಗಿಗಳಿಗೆ ನೀಡುತ್ತಿರುವ ವೈದ್ಯಕೀಯ ಸೇವೆಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಉಪಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಡಿವೈಎಸ್ ಪಿ ವೆಂಕಟೇಶ್, ಡಿವೈಎಸ್ ಪಿ ಗಿರೀಶ್ ರೋಡ್ಕರ್, ಇನ್ಸ್ಪೆಕ್ಟರ್ ರಮೇಶ್, ದೊಡ್ಡಬಳ್ಳಾಪುರ ನಗರ ಠಾಣೆ ಇನ್ ಸ್ಪೆಕ್ಟರ್ ಅಮರೇಶ್ ಗೌಡ ಸೇರಿದಂತೆ‌‌ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!