ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸುಮಾರು 6-7 ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟಮೆ ತಡರಾತ್ರಿ ಸುಮಾರು 2:50 ರಿಂದ 3:15ರ ಸಮಯದಲ್ಲಿ ನಡೆದಿದೆ.
ಬಾಳೆ ಹಣ್ಣಿನ ಅಂಗಡಿ, ಬಾಳೆ ಎಲೆ ಅಂಗಡಿ, ರೇಷನ್ ಅಂಗಡಿ, ಗ್ರಂಧಿಗೆ ಅಂಗಡಿ, ತೆಂಗಿನ ಕಾಯಿ ಅಂಗಡಿ, ಹೂವಿನ ಅಂಗಡಿ ಸೇರಿದಂತೆ ಒಂದೇ ಸಾಲಿನಲ್ಲಿರುವ ಸುಮಾರು 7ಅಂಗಡಿಗಳ ಬೀಗ ಮುರಿದು ಒಳ ಹೋಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡಿದಿದೆ.
ಕೇವಲ ಒಬ್ಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ಸಿಸಿಟಿಯಲ್ಲಿ ದೃಶ್ಯ ಸೆರೆಯಾಗಿದೆ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.