ನಗರದಲ್ಲಿ ಸುಮಾರು ಅರ್ಧ ತಾಸು ಆಲಿಕಲ್ಲು ಸಹಿತ ಮಳೆ ಬಿದ್ದು ಬಿಸಿಲಿನ ತಾಪಕ್ಕೆ ಬೆಂದಿದ್ದ ಭೂಮಿ ತಣ್ಣಗಾಗಿಸಿತು. ದಿಢೀರ್ ಮಳೆ ಬಂದಿದ್ದರಿಂದ ದಿಕ್ಕಾಪಾಲಾಗಿ ಓಡಿ ಮಳೆಯಿಂದ ಆಶ್ರಯ ಪಡೆದ ಜನ.
ತೀವ್ರ ತಾಪಮಾನ ಏರಿಕೆಯಿಂದ ಬೇಸತ್ತಿದ್ದ ಜನ, ಮಳೆ ಬರುವುದನ್ನೇ ಕಾಯುತ್ತಿದ್ದ ಜನರಿಗೆ ಅಲ್ಪ ಸಂತೃಪ್ತಿ ತಂದ ಮಳೆರಾಯ.
ಕೆಲ ದಿನಗಳಿಂದ ಬಿಸಿಲಿನ ಝಳ ಅನುಭವಿಸಿದ ಜನರಿಗೆ ಶನಿವಾರ ಸಂಜೆ 4.30ರ ಸುಮಾರಿನಲ್ಲಿ ಭಾರಿ ಗಾಳಿ, ಸಿಡಿಲಿನೊಂದಿಗೆ ಸುರಿದ ಮಳೆ ಅಲ್ಪಮಟ್ಟಿಗೆ ವಾತಾವರಣವನ್ನು ತಂಪೇರಿಸಿತು.