ನಗರದ ಐತಿಹಾಸಿಕ ಸುಪ್ರಸಿದ್ದ ಶ್ರೀ ಸಪ್ತಮಾತೃಕೆ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಮೇ 5 ರಂದು ನಡೆಯಲಿದ್ದು, ಕರಗ ಮಹೋತ್ಸವ ಹಿನ್ನೆಲೆ ಇಂದು ಹಸಿ ಕರಗ ಮಹೋತ್ಸವ ಸಹಸ್ರಾರು ಭಕ್ತಮಹಾಶಯ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಗುರುವಾರ ಮುಂಜಾನೆ 4.30ರ ನಂತರ ನಗರದ ಸದ್ಗುರು ಗಗನ ಆರ್ಯರ ಸನ್ನಿಧಿಯಿಂದ ಮೆರವಣಿಗೆ ಹೊರಟು, ಆಸ್ಪತ್ರೆ ಸರ್ಕಲ್, ನೆಲದಾಂಜನೇಯ ಸ್ವಾಮಿ ದೇವಾಲಯ, ಏಳು ಸುತ್ತಿನ ಕೋಟೆ ನಾರಾಯಣ ಮಂದಿರಕ್ಕೆ ಭೇಟಿ ನೀಡಿ ಮತ್ತೆ ದೇವಾಲಯಕ್ಕೆ ಹಿಂತಿರುಗಿತು.
ಪೂಜಾರಿ ಮುನಿರತ್ನಂ ಬಾಲಾಜಿ ಅವರು ಹಸಿ ಕರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಇಂದು ಸಂಜೆ 06ಗಂಟೆಗೆ ಶ್ರೀ ದ್ರೌಪತಮ್ಮನವರಿಗೆ ಆರತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೇ.05ರಂದು ರಾತ್ರಿ 09.45ಕ್ಕೆ ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.