ನಗರದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಸಪ್ತಮಾತೃಕೆ ಮಾರಿಯಮ್ಮ ದೇವಿಯ ಕರಗ ಮಹೋತ್ಸವವನ್ನ ಭಕ್ತಿಭಾವದಿಂದ ನಡೆಸಲಾಯಿತು.
ಶುಕ್ರವಾರ ಕರಗ ಮಹೋತ್ಸವ ಹಿನ್ನೆಲೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ದೇವಿಗೆ ವಿಶೇಷ ಪೂಜೆ, ಕೈಂಕರ್ಯದಲ್ಲಿ ತೊಡಗಿದ್ದರು. ದೇವಿಯ ದೇವಾಲಯದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ಹೋಮ ಹವನ, ಪೂಜಾ ಕಾರ್ಯಕ್ರಮ ನಡೆಸಲಾಯಿತು.
ನಗರದ ಹಳೇ ಬಸ್ ನಿಲ್ದಾಣ ಬಳಿಯ ಸಿದ್ದಲಿಂಗಯ್ಯ ವೃತ್ತದಲ್ಲಿ ಏರ್ಪಡಿಸಿದ್ದ ಕರಗ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡ ಭಕ್ತಮಹಾಶಯರು. ಕರಗ ನೃತ್ಯ ಪ್ರದರ್ಶನವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ ಜನಸ್ತೋಮ.
ವೇದಿಕೆ ನೃತ್ಯ ಪ್ರದರ್ಶನ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆ ನಡೆಸಲಾಯಿತು. ಕರಗ ತಮ್ಮ ಮನೆಗಳು, ಬೀದಿಗಳ ಬಳಿ ಬಂದಾಗ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ತಮ್ಮ ಹರಕೆ ಹೊತ್ತು ದೇವಿಗೆ ನಮಿಸಿದ ಭಕ್ತರು. ಕರಗ ಸಾಗುವ ವೇಳೆ ಭಕ್ತರು ಮಲ್ಲಿಗೆಯ ಹೂಮಳೆಯ ಸುರಿಸಿ ಭಕ್ತಿಯಲ್ಲಿ ಮಿಂದೆದ್ದರು.