ನಗರದಲ್ಲಿ ಮುಂದುವರಿದ ಮಳೆ ಅವಾಂತರ, ಜನ ಜೀವನ ಅಸ್ತವ್ಯಸ್ತ. ಎಲ್ಲರೂ ಗೂಡು ಸೇರುವ ಸಮಯದಲ್ಲಿ ಬಂದ ಮಳೆ.
ನಗರದಾದ್ಯಂತ ಮಂಗಳವಾರ ಬಿರುಸಿನ ಮಳೆಯಾಗಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಜೆ 6ಕ್ಕೆ ಶುರುವಾದ ಮಳೆ ಸಂಜೆ 7ಗಂಟೆ ಆದರೂ ಮಳೆ ಎಡೆಬಿಡದೆ ಸುರಿದಿದೆ.
ದಿಢೀರ್ ಮಳೆ ಸುರಿದುದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ರಭಸವಾಗಿ ಸುರಿದ ಮಳೆಗೆ ಮನೆಗೆ ಹೋಗಲು ಮಕ್ಕಳು, ನೌಕರರು ಪರದಾಡಬೇಕಾಯಿತು. ನಗರದ ಬಹುತೇಕ ಚರಂಡಿಗಳು ಕಸ-ಕಡ್ಡಿಗಳಿಂದ ತುಂಬಿಕೊಂಡಿದ್ದರಿಂದ ಮಳೆ ನೀರು ರಸ್ತೆ ಮೇಲೆ ಸಂಗ್ರಹಗೊಂಡಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.