ನಗರದಲ್ಲಿ ನರ್ಸರಿ ಅಭಿವೃದ್ಧಿ ಪಡಿಸುವ ಕುರಿತು ಕಾರ್ಯಾಗಾರ

ಪ್ರತಿಯೊಬ್ಬರಿಗೂ ಸಕಾಲದಲ್ಲಿ ನರ್ಸರಿ ಗಿಡಗಳು  ದೊರಕಬೇಕೆನ್ನುವ ಉದ್ದೇಶದಿಂದ ಸರ್ಕಾರ ನರ್ಸರಿಯನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಸಾಹಾಯ ಸಂಘಗಳಿಗೆ  ಉತ್ತೇಜನ ನೀಡುತ್ತಿದೆ ಎಂದು  ಜಿ.ಪಂ ಉಪಕಾರ್ಯದರ್ಶಿ ಟಿ.ಕೆ  ರಮೇಶ್ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನ ತೋಟಗಾರಿಕ ಕ್ಷೇತ್ರದಲ್ಲಿ  ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ವ ಸಹಾಯ ಮಹಿಳಾ ಸಂಘದಿಂದ  ಮಂಗಳವಾರ ನರ್ಸರಿ ಅಭಿವೃದ್ಧಿಪಡಿಸುವ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು, ವಿವಿಧ ಇಲಾಖೆಗಳ ಸಹಾಯದೊಂದಿಗೆ ಅಧಿಕಾರಿಗಳ ಸಮ್ಮುಖದಲ್ಲಿ  ತರಬೇತಿ ಕಾರ್ಯಕ್ರಮ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಸರಕಾರ  ಬೇಡಿಕೆಗೆ ಅನುಗುಣವಾಗಿ ನರ್ಸರಿ ಸಸಿಗಳನ್ನು ಪ್ರತಿಮನೆಗೂ ತಲುಪಿಸಲು ಸಾಧ್ಯವಾಗುತಿಲ್ಲ ಆದ್ದರಿಂದ ಸ್ವಸಹಾಯ ಸಂಘಗಳ ಮೂಲಕ ತರಬೇತಿ ನೀಡಿ  ನರ್ಸರಿಗಳನ್ನು ಉತ್ತೇಜಿಸಿ ಎಲ್ಲಿರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಾಂತ 12 ಸ್ವಸಹಾಯ ಸಂಘಗಳನ್ನು ಗುರುತಿಸಿದ್ದು  ನರ್ಸರಿ ಅಭಿವೃದ್ದಿಗಾಗಿ ಶ್ರಮಿಸಲಾಗುತ್ತಿದೆ ಎಂದರು.

ಈ ವೇಳೆ ಕಾರ್ಯಾಗಾರದಲ್ಲಿ ಜೆ.ಗುಣವಂತ, ತೋಟಗಾರಿಕೆ ಉಪನಿರ್ದೇಶಕರು,ಉಪ ನಿರ್ದೇಶಕರು ರೇಷ್ಮೆ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್, ಮುನಿರಾಜು, ಮಧು, ಮಂಜುನಾಥ್ ರವರು ಉಪಸ್ಥಿತರಿದ್ದರು.ಕೆ.ವಿ.ಕೆ.ಯ ವಿಜ್ಞಾನಿಗಳಾದ ಡಾ.ಜಗದೀಶ್, ಬಿ.ಚುಂಚಯ್ಯ ಹಿ.ಸ.ತೋ.ನಿ ಹಾಗೂ ಹರ್ಷವರ್ಧನ್ ,ಉಪನಿರ್ದೇಶಕರು ವಿಷಯವಾರು ತರಬೇತಿ ನೀಡಿದರು. ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನರ್ಸರಿ ಅಭಿವೃದ್ಧಿ ಪಡಿಸುವ ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *