ನಗರದಲ್ಲಿನ ಇತಿಹಾಸ ಪ್ರಸಿದ್ಧ ಕೆರೆ, ಬಾವಿ, ಕಲ್ಯಾಣಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ನಾಗರಕೆರೆ, ರಾಮಣ್ಣಬಾವಿ, ಸೋಮೇಶ್ವರ ದೇವಾಸ್ಥಾನ ಪಕ್ಕದ ಕಲ್ಯಾಣಿ, ಕೋಟೆ ಮುಂಭಾಗದ ಕಲ್ಯಾಣಿ ಸೇರಿದಂತೆ ಇತರೆ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಕುಲಕಂಷವಾಗಿ ಪರಿಶೀಲನೆ ನಡೆಸಿದ್ದಾರೆ.
ಕೆಲ ಕೆರೆ, ಬಾವಿ, ಕಲ್ಯಾಣಿಗಳ ಜಾಗ ಒತ್ತುವರಿ, ಅಭಿವೃದ್ಧಿ ಕುಂಠಿತ ವಿಚಾರ, ದುರಸ್ತಿ ಕಾರ್ಯ ಸೇರಿದಂತೆ ಇತರೆ ವಿಚಾರ ಜಿಲ್ಲಾಧಿಕಾರಿ ಗಮನಕ್ಕೆ ಬಂದ ಹಿನ್ನೆಲೆ ಇಂದು ಭೇಟಿ ಇನ್ನಷ್ಟು ಮಾಹಿತಿ ಪಡೆದಿದ್ದಾರೆ.
ಕೆರೆ, ಬಾವಿ, ಕಲ್ಯಾಣಿಗಳ ಪುನಶ್ಚೇತನ ಮಾಡಬೇಕೆಂದು ನಗರದ ಕೆಲ ಬಾವಿ, ಕೆರೆ, ಕಲ್ಯಾಣಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೆಲ ಕಲ್ಯಾಣಿಗಳು ಪಾಳು ಬಿದ್ದಿವೆ. ಅವುಗಳನ್ನು ಪುನಶ್ಚೇತನ ಮಾಡುವ ಕುರಿತು ಭರವಸೆ ನೀಡಿದ್ದಾರೆ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಹೇಳಿದರು.