ನಗರದಲ್ಲಿ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ (ಬೃಹತ್ ಎಕ್ಸಿಬಿಷನ್) ಆಯೋಜನೆ

ಮನೋರಂಜನೆಗಾಗಿ ಎಸ್ಎಂಎಂಎಸ್ ಗ್ರೂಪ್ ವತಿಯಿಂದ ಫಾರಿನ್ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ (ಬೃಹತ್ ಎಕ್ಸಿಬಿಷನ್) ಆಯೋಜನೆ ಮಾಡಲಾಗಿದ್ದು, ಸ್ನೇಹಿತರೊಂದಿಗೆ, ಪೋಷಕರೊಂದಿಗೆ. ಮಕ್ಕಳೊಂದಿಗೆ, ಎಲ್ಲರೊಂದಿಗೆ ಇಂದೇ ಭೇಟಿ ನೀಡಿ ಮಸ್ತ್ ಮಜಾ ಮಾಡಬಹುದಾಗಿದೆ.

ನಗರದ ಹಾಲಿನ ಡೈರಿ ಮುಂಭಾಗ ಸಮೃದ್ಧಿ ಹೋಟೆಲ್ ಹಿಂಭಾಗ ಸಂಪೂರ್ಣ ಕುಟುಂಬದ ಮನೋರಂಜನೆಗಾಗಿ ಫಾರಿನ್ ಸೆಲ್ಫಿ ಎಕ್ಸಿಬಿಷನ್ ನಲ್ಲಿ ರಿಯಲ್ ಫಿಶ್ ಜೊತೆಗೆ ದಸರಾ ಉತ್ಸವ ಮೇಳವನ್ನು ಆಯೋಜನೆ ಮಾಡಲಾಗಿದೆ.

ಮನರಂಜನೆಮಯ ಆಟಗಳನ್ನು ಒಳಗೊಂಡಂತೆ ವಿಧವಿಧ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ.

ಸಂಪೂರ್ಣ ಕುಟುಂಬಕ್ಕೆ ಭರ್ಜರಿ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಅನ್ನು ಎಸ್ಎಂಎಸ್ ಗ್ರೂಪ್ ನೀಡುತ್ತಿದ್ದು, ತಾವು ಭೇಟಿ ನೀಡುವ ಮೂಲಕ ಮನೋರಂಜನೆಯ ಮಹಾಪೂರವನ್ನು ಸವಿಯಬಹುದಾಗಿದೆ.

ಶಾಪಿಂಗ್ ಸೇರಿದಂತೆ ವಿಶೇಷ ಆಟಿಕೆಗಳಾದ ಕೊಲಂಬಸ್, ಡ್ಯಾನ್ಸಿಂಗ್ ಚೇರ್, ಬ್ರೇಕ್ ಡಾನ್ಸ್, ಡ್ರ್ಯಾಗನ್ ಟ್ರೈನ್ , ಬಿಗ್ಗೆಸ್ಟ್ ಜಾಯಿಂಟ್ ವೀಲ್, ಪವರಿಂಗ್ ಸೆಲ್ಫಿ ಷೋ ಸೇರಿದಂತೆ 15ಕ್ಕೂ ಹೆಚ್ಚು ಜಾಲಿ ರೈಡ್ ಗಳನ್ನು ಸಾರ್ವಜನಿಕರಿಗಾಗಿ ಸಿದ್ದಪಡಿಸಲಾಗಿದೆ. ಪ್ರತಿದಿನ ಸಂಜೆ 5 ರಿಂದ 10 ರ ವರೆಗೆ ಈ ಮನೋರಂಜನೆಯನ್ನು ಸಾರ್ವಜನಿಕರು ಸವಿಯಬಹುದಾಗಿದೆ.

ಯುವಕ ಯುವತಿಯರ ಸೆಲ್ಫಿಗಾಗಿ ಅತ್ಯಾಕರ್ಷಕ ಫೋಟೋ ಶೂಟ್ ಗಾಗಿ ಬ್ಯಾಕ್ ಗ್ರೌಂಡ್ ಸೀನ್ ಗಳು, ಚಿಕ್ಕ ಮಕ್ಕಳಿಗಾಗಿ ಕಾರ್ ರೇಸ್, ಬೋಟಿಂಗ್, ಡ್ಯಾಷಿಂಗ್ ಕಾರ್ ಗಳು ಸಹ ಇವೆ…..

Leave a Reply

Your email address will not be published. Required fields are marked *