
ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡಿದ್ದ ಕೋಲಾರದ ಖತರ್ನಾಕ್ ಗ್ಯಾಂಗ್ ಹೊಸಕೋಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಕೋಲಾರದ ಖತರ್ನಾಕ್ ಗ್ಯಾಂಗ್ ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 65 ಲಕ್ಷ ವಂಚನೆ ಮಾಡಿದ್ದಾರೆ. ಬೆಂಗಳೂರು ಹೊರಹೊಲಯವೇ ಇವರ ಟಾರ್ಗೆಟ್ ಏರಿಯಾಗಳು..

ತಾಲೂಕು ಕಚೇರಿ, ಹೋಟೆಲ್ ಗಳ ಬಳಿ ತೆಲುಗು ಭಾಷೆ ಮಾತಾಡೋರೇ ಇವರ ಬಂಡವಾಳ.. ಆತ್ಮೀಯ ಪರಿಚಿತರಂತೆ ಬಿಲ್ಡಪ್ ಕೊಟ್ಟು ಬ್ರೈನ್ ವಾಶ್ ಮಾಡಿ, ಕೇರಳದ ಒಂದು ಜಾಗದಲ್ಲಿ ಭೂಮಿ ಕೆಲಸ ಮಾಡುವಾಗ ಚಿನ್ನದ ಹಾರ ಸಿಕ್ಕಿದೆ..ಅದು ರಾಜಮಹಾರಾಜರ ಕಾಲದ ಚಿನ್ನದ ಹಾರ, ಈಗಿನ ಚಿನ್ನದ ರೇಟಿಗಿಂತ ಹೆಚ್ಚು.. ಹೀಗೆ ವ್ಯಕ್ತಿಗಳನ್ನ ಬ್ರೈನ್ ವಾಶ್ ಮಾಡಿ ಮೊಬೈಲ್ ನಲ್ಲಿ ನಕಲಿ ಚಿನ್ನದ ಹಾರವನ್ನು ತೋರಿಸೋದು.. ನಂಬಿಕೆ ಬರಲಿ ಅಂತ ಎರಡು ಚಿನ್ನದ ಅಸಲಿ ಗುಂಡುಗಳನ್ನ ತೋರಿಸಿ ಇದು ಸರದ ತುದಿಯ ಗುಂಡುಗಳು ಎಂದು ನಂಬಿಕೆ ಬರುವಂತೆ ಚರ್ಚೆ ಮಾಡೋದು, ಎಂಟು ಕೆಜಿ ಚಿನ್ನದ ಹಾರವನ್ನು ಕಡಿಮೆ ಬೆಲೆಗೆ ಕೊಡ್ತೇವೆಂದು ಯಾಮಾರಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ಈ ಗ್ಯಾಂಗ್.
ಎಲ್ಲಾ ಮೊಬೈಲ್ ನಲ್ಲೇ ನೋಡಿ ವಿಡಿಯೋ ಕಾಲ್ ಮೂಲಕ ಜಾಗ ಫಿಕ್ಸ್ ಮಾಡಿ, ಈ ಮೂಲಕ ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್ ಆಗೋದು ಇವರ ಕೆಲಸ. ಮನೆಗೆ ಹೋಗಿ ಪರಿಶೀಲಿಸಿದ್ದ ಹಣ ಕೊಟ್ಟಿದ್ದ ವ್ಯಕ್ತಿಗಳು ಶಾಕ್ ಆಗುತ್ತಿತ್ತು.
ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಪೊಲೀಸರಿಂದ ಪ್ರಮುಖ ಆರೋಪಿ ರಾಜೇಶ್ ಎಂಬಾತ ಸೇರಿ ನಾಲ್ವರ ಬಂಧನ ಮಾಡಲಾಗಿದೆ….