ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆಯಿಂದ ವೀಲ್ಹಿಂಗ್ ಮಾಡುತ್ತಿದ್ದ ಪುಂಡರ ಎಡೆಮುರಿ ಕಟ್ಟಿದ್ದಾರೆ.
ಇನ್ಸ್ಪೆಕ್ಟರ್ ರಾಘವೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೀಲ್ಹಿಂಗ್ ಮಾಡುತ್ತಿದ್ದ 15 ಪುಂಡರನ್ನು ಬಂಧನ ಮಾಡಲಾಗಿದೆ. ಬಂಧಿತರಿಂದ ವೀಲ್ಹಿಂಗ್ ಗೆ ಬಳಸಿದ್ದ ಬರೋಬ್ಬರಿ 25 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ.
ಪುಂಡರು ದೇವನಹಳ್ಳಿಯ ನಂದಿಬೆಟ್ಟದ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದರು. ದೇವನಹಳ್ಳಿಯ ರಾಣಿ ಸರ್ಕಲ್ ನಲ್ಲಿ ವಾಹನಗಳಿಗೆ ಅಡ್ಡಗಟ್ಟಿ ಇತರೆ ಸವಾರರಿಗೆ ತೊಂದರೆ ನೀಡುತ್ತಿದ್ದರು. ವೀಲ್ಹಿಂಗ್ ಗೆ ಬಳಸಿದ್ದ ಡಿಯೋ, ಆರ್ ಎಕ್ಸ್, ಪಲ್ಸರ್ ಸೇರಿದಂತೆ ವಿವಿಧ ರೀತಿಯ ಬೈಕ್ ಗಳು ಸೀಜ್ ಮಾಡಲಾಗಿದೆ.