ರಾಜ್ಯದಲ್ಲಿ ಗುಜರಾತ್‌ನ ‘ಅಮೂಲ್’ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ವಿರುದ್ಧ ಮುಂದುವರಿದ ತೀವ್ರ ಆಕ್ಷೇಪ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ರಾಜ್ಯದ ಅಸ್ಮಿತೆ ‘ನಂದಿನಿ’ ಬ್ರ್ಯಾಂಡ್‌ನ ಪರ ಧ್ವನಿ ಎತ್ತಿದೆ.
ಗುಜರಾತ್‌ನ ‘ಅಮೂಲ್’ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಸಜ್ಜಾದ ಕರ್ನಾಟಕ ರಕ್ಷಣಾ ವೇದಿಕೆ.
ಇಂದು ತಾಲೂಕಿನ ತಾಲೂಕು ಕಚೇರಿ ಎದುರು ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆ ಸಾಂಕೇತಿಕವಾಗಿ ಅಮೂಲ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಬಿಟ್ಟು, ನಂದಿನಿ ಹಾಲಿಗೆ ಮಾನ್ಯತೆ ನೀಡಬೇಕು ಎಂದು ತಹಶಿಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣ ವೀರಪ್ಪ, ರಾಜ್ಯ ಉಪಾಧ್ಯಕ್ಷರು ಪುಟ್ಟೇಗೌಡರು, ಅನ್ನಪೂರ್ಣ, ತಾಲೂಕು ಅಧ್ಯಕ್ಷ ಪುರುಷೋತ್ತಮಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.