‘ಧೀರಾಜ್ ಮುನಿರಾಜ್ ಅವರು ಶಾಸಕರಾಗಿ ಒಂದೂವರೆ ವರ್ಷ ಕಳೆದಿದೆ- ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ’-ಅನುದಾನ ಹಂಚಿಕೆಯಲ್ಲಿ ತಾರತಮ್ಯ- ವಿಷಬೀಜ ಬಿತ್ತುವ ಕೆಲಸ ನಾವು ಮಾಡಿಲ್ಲ, ನೀವು ಮಾಡುತ್ತಿದ್ದೀರಾ….- ನಗರಸಭಾ ಸದಸ್ಯ ಶಿವಶಂಕರ್(ಶಂಕ್ರಿ)‌ ಕಿಡಿ

ಕಾಂಗ್ರೆಸ್ ಸರ್ಕಾರ ಯಾವುದೇ ತಾರತಮ್ಯ ಮಾಡದೇ ಅನುದಾನ ಬಿಡುಗಡೆ ಮಾಡಿದೆ. ಆದರೆ, ಶಾಸಕರು ವಾರ್ಡ್ ವಾರು ಅನುದಾನದ ಕ್ರಿಯಾಯೋಜನೆ ಮಾಡುವಾಗ ಎಲ್ಲಾ ನಗರಸಭೆ ಸದಸ್ಯರನ್ನ ಒಳಗೊಂಡು ಮಾಡಬೇಕು. ಆದರೆ, ಕೇವಲ ಬಿಜೆಪಿ, ಜೆಡಿಎಸ್ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಈ ರೀತಿಯಾಗಿ ನಗರದ ಅಭಿವೃದ್ದಿಗೆ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ನಾನು ಬಿಜೆಪಿಯಲ್ಲಿ ಇದ್ದವನೇ ಸುಮಾರು 12 ವರ್ಷ ಬಿಜೆಪಿಗೆ ಅಳಿಲು ಸೇವೆ ಮಾಡಿದ್ದೇನೆ. ನೀವು ಬಂದು ವಿಷ ಬಿಜೆಪಿ ಬಿತ್ತಿತ್ತುರೋದು, ನಿಮ್ಮ ಜೊತೆಯಲ್ಲಿರುವ ಕೆಲ ಮುಖಂಡರು ವಿಷ ಬೀಜ ಬಿತ್ತುತ್ತಿರೋದು ಕಾರಣಾಂತರಗಳಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿ ನಿಷ್ಠಯಿಂದ ಇದ್ದೇವೆ. ನೀವು ಶಾಸಕರಾಗಿ ನಗರಸಭೆ ವಾಪ್ತಿಯಲ್ಲಿ ಒಂದು ರಸ್ತೆ‌ಗುಂಡಿ ಮುಚ್ಚಿಲ್ಲ, ಎಲ್ಲೂ ಶಾಸಕರ ಹೆಸರಿನ ಶಂಕುಸ್ಥಾಪನೆ ನಾಮ ಫಲಕವಿಲ್ಲ ಎಂದು ನಗರಸಭಾ ಸದಸ್ಯ ಶಿವಶಂಕರ್ (ಶಂಕ್ರಿ) ಅವರು ತಮ್ಮ ಆಕ್ರೋಶ ಹೋರ ಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಕೊಟ್ಟ ಕೊಡುಗೆಗಳನ್ನು ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಇದೇ ಅವರ ಸಾಧನೆ. ಇದೂವರೆಗೂ ಬಿಜೆಪಿ ಸರ್ಕಾರದಿಂದ ನೇಕಾರರಿಗೆ ಯಾವ ಉಪಯೋಗವಾಗಿಲ್ಲ. ನೇಕಾರರನ್ನು ತುಳಿಯುವ ಕೆಲಸ ಮಾಡುತ್ತಿದ್ದೀರಿ. ಶಾಸಕರಾದ ಮೇಲೆ ಇದುವರೆಗೂ ನೇಕಾರರ ಸಭೆ ನಡೆಸಿ, ಅವರ ಸಮಸ್ಯೆ ಆಲಿಸಿಲ್ಲ. ಸರ್ವಾಧಿಕಾರ ಧೋರಣೆ ಬಿಟ್ಟು ಪಕ್ಷಾತೀತವಾಗಿ ತಾಲೂಕಿನ ಅಭಿವೃದ್ಧಿ ಕಡೆಗೆ ಗಮನಹರಿಸಿ. ಅನುದಾನದಲ್ಲಿ ರಾಜಕೀಯ ಮಾಡುತ್ತೀರಾ..? ಎಂದು ಪ್ರಶ್ನಿಸಿದರು.

ನಂತರ ಕೆ.ಪಿ.ಸಿ.ಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಅವರು ಮಾತನಾಡಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸರಿಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ಅವರ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯವಾಗಿವೆ. ಈ ಹಿಂದೆ ಟಿ.ವೆಂಕಟರಣಯ್ಯ ಶಾಸಕರಾಗಿದ್ದಾಗ ಮಂಜೂರಾಗಿದ್ದ ಕಾಮಗರಿಗಳ ಹೆಸರನ್ನೇಳಿ ಅಭಿವೃದ್ದಿ ಎಂದು  ಹೇಳುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನದ ಅಡಿಯಲ್ಲಿ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರ ಸಭೆಯ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿ ವಾಸ ಮಾಡುವ  ವಾರ್ಡ್ ಗಳಿಗೆ ಅನುದಾನ ಹಂಚಿಕೆ ಮಾಡಬೇಕಿತ್ತು, ಆದರೆ, ಈ ನಿಯಮವನ್ನು ಮೀರಿ ಅಲ್ಪಸಂಖ್ಯಾರೇ ಇಲ್ಲದ ಸ್ಥಳಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಕ್ರಿಯಾ ಯೋಜನೆ ಮಾಡುವಾಗ ನಗರ ಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂಚಿಕೆ ಮಾಡಬೇಕಿತ್ತು. ಆದರೆ, ಕೇವಲ ಬಿಜೆಪಿ-ಜೆಡಿಎಸ್ ಸದಸ್ಯರಿರುವ ವಾರ್ಡ್ ಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಿ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ ಕೆಐಆರ್‌ಡಿಎಲ್ ವಿಭಾಗಕ್ಕೆ ಕಾಮಗಾರಿಯನ್ನು ಗುತ್ತಿಗೆಗೆ ನೀಡದೇ, ರಾಜಾಜಿನಗರದ ಎರಡನೇ ಡಿವಿಷನ್ ಗೆ ಒಪ್ಪಿಸಿದ್ದಾರೆ. ಇದು ಕಾನೂನೂ ಬಾಹಿರ.  ಅಲ್ಲದೇ, ನಗರ ಸಭೆ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ನಗರ ಸಭೆಯ ಅನುಮತಿಯನ್ನು ಪಡೆಯಬೇಕು. ಯಾವುದೇ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದು ಅಕ್ರಮವಾಗಿದೆ. ಕೆಐಆರ್‌ಡಿಎಲ್‌ಯಲ್ಲಿ  ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿ ನಗರ ಸಭೆ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಆತ ಬಹಿರಂಗವಾಗಿ ಕ್ಷಮೆ ಕೇಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೂರು ನೀಡಿ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮಾತನಾಡಿ, ತಾಲೂಕಿನ ಜನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅಭಿವೃದ್ದಿ ಮಾಡದೇ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಾ ಕಾಲಕಳೆಯುತ್ತಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನಗರ ಸಭೆ, ಗ್ರಾಮಾಂತರ ವ್ಯಾಪ್ತಿಯಲ್ಲಿ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಹೇಮಂತ್ ರಾಜ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ ಜಗನ್ನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಅಲ್ಪಸಂಖ್ಯಾತರ ಅಧ್ಯಕ್ಷ ಬಷೀರ್, ನಗರಸಭಾ ಸದಸ್ಯರಾದ ಆನಂದ್, ಅಲ್ತಾಫ್, ನಾಗವೇಣಿ, ನಾಗರಾಜು, ಶಿವಣ್ಣ, ಎಚ್.ಬಿ ಅಖಿಲೇಶ್, ವಾಣಿ, ಕಾಂಗ್ರೆಸ್ ಮುಖಂಡ ಮಂಜುನಾಥ್, ಸುಬ್ರಮಣಿ, ಶ್ರೀನಿವಾಸ್, ಫಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!