
ಇಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅವರ ಜನ್ಮದಿನ ಹಿನ್ನೆಲೆ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಹುಟ್ಟುಹಬ್ಬದ ಶುಭಾಶಯ ತಿಳಿಸಿ ಶುಭಕೋರಿದರು.
ಅದರಂತೆ ಹಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಶಾಸಕ ಧೀರಜ್ ಮುನಿರಾಜ್ ಅವರ ಜನ್ಮದಿನದ ಶುಭಾಷಯ ಕೋರಿದರು.
ಶುಭಕೋರಿ ಮಾತನಾಡಿದ ಹಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಯ್ಯ ಟಿ ಅವರು, ಶಾಸಕ ಧೀರಜ್ ಮುನಿರಾಜ್ ಅವರು ನವ ದೊಡ್ಡಬಳ್ಳಾಪುರ ಕನಸು ಕಂಡು ಅದನ್ನು ನನಸಾಗಿಸಲು ಸತತ ಪ್ರಯತ್ನಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಹಿಂದಾ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ದಲಿತಪರ, ರೈತಪರ, ಕಾರ್ಮಿಕರ ಪರ, ನೇಕಾರರ ಪರ ಹಾಗೂ ಯಾವುದೇ ಜಾತಿ ಭೇದ ಮಾಡದೇ ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇಂತಹ ಜನನಾಯಕನನ್ನ ಪಡೆದುಕೊಂಡಿರುವುದೇ ನಮ್ಮ ಪುಣ್ಯ, ಭ್ರಷ್ಟಮುಕ್ತ ಆಡಳಿತ ಸೇವೆ ಮಾಡಬೇಕು, ಸದನದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಸಾಕಷ್ಟು ಸರ್ಕಾರ ಬಳಿ ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಹಳೇಕೋಟೆ ಬಿಜೆಪಿ ಮುಖಂಡರಾದ ಟಿ ಡಿ ಮುನಿಯಪ್ಪ, ಮುನಿಶ್ಯಾಮಯ್ಯ, ಸಿದ್ಧರಾಜು, ಚಲುವರಾಜು, ಕೆಂಪರಾಜು, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು…