ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು ಏನು ಸಿಕ್ಕಿದೆ ಎಂದು ನನಗೆ ಗೊತ್ತಿಲ್ಲ. ದೇಶ ವಿದೇಶಗಳಲ್ಲಿಯೂ ಕೂಡ ತನ್ನದೇ ಆದ ಸ್ಥಾನ ಉಳಿಸಿಕೊಂಡು ಬಂದಿದೆ. ಸಿಂಗದೂರು ಚೌಡೇಶ್ವರಿ ದೇವಿಗೆ ವರ್ಷದ ಮೊದಲ ಪೂಜೆ ಮಾಡುವುದು ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ. ಇಂತಹ ಸಂದರ್ಭದಲ್ಲಿ ಕಾನೂನುನನ್ನು ಪ್ರಶ್ನೆ ಮಾಡಲ್ಲ. ತನಿಖೆ ಬೇಗ ಮುಗಿಸಿ ನ್ಯಾಯ ಕೊಡಿಸಿ ಭಾರತೀಯ ಪರಂಪರೆಯನ್ನ ಉಳಿಸಬೇಕು. ಪರಂಪರೆ, ನಮ್ಮ ಸಂಸ್ಕಾರ ಭಾವನೆಯನ್ನು ಕದಡುವ ಕೆಲಸ ಮಾಡಬಾರದು. ಎಸ್ ಐಟಿ ಬಗ್ಗೆ ಗೌರವ, ನಂಬಿಕೆಯಿದೆ. ಸರಕಾರ ಕೆಲಸ ಮಾಡುತ್ತಿದೆ ಎಂದರು.
*ಮಾಧ್ಯಮಗಳನ್ನು ದೂಶಿಸಿದ ಕೇಂದ್ರ ಸಚಿವ*
ಮಾಧ್ಯಮಗಳು 24 ಗಂಟೆ ಇದೇ ಸುದ್ದಿ ಮಾಡಿಕೊಂಡು ಹೋಗುತ್ತೀರಾ. ಮೆಕ್ಕಾ ಮದೀನಕ್ಕೆ ಎಷ್ಟು ಜನ ಹೋಗುತ್ತಾರೆ. ಕೆಲವರು ಅಲ್ಲಿ ಸಾಯೋದಕ್ಕೆ ಹೋಗುತ್ತಾರೆ. ಜಿಗುಪ್ಸೆಯಿಂದ ವೇಲಾಂಗಿಣಿಗೆ ಹೋಗಿ ಸಾವನಪ್ಪುತ್ತಾರೆ. ಇದೇ ಕೆಲಸವನ್ನ ಮೆಕ್ಕಾ ಮದೀನದಲ್ಲಿ ಮಾಡುತ್ತೇವಾ…ವೇಲಾಂಗಿಣಿಯಲ್ಲಿ ಮಾಡುತ್ತೇವಾ- ಧರ್ಮಸ್ಥಳ ಪ್ರಸಾರ ಕುರಿತು ಸಚಿವ ಅಸಮಧಾನ ವ್ಯಕ್ತಪಡಿಸಿದರು.
ಚೆಲುವನಾರಾಯಣಸ್ವಾಮಿ ಹೇಳಿಕೆ ವಿಚಾರ
ಮಂಡ್ಯದಲ್ಲಿ ಚೆಲುವನಾರಾಯಣಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ನಾನು ಬೆಳಗ್ಗೆ ಕೂಡ ಅವರ ಬಳಿ ಮಾತನಾಡಿದ್ದೇನೆ. ಅವರು ರಸಗೊಬ್ಬರ ಕೊಟ್ಟಿರೋದು ಕೇವಲ ಆರು ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ. ಆದರೇ ಅವರ ಬಳಿ ಇರೋದು ಎಂಟು ಲಕ್ಷ ಟನ್ ಇದೆ. ಇನ್ನೂ ಹದಿನೈದು ಸಾವಿರ ಟನ್ ಕೇಂದ್ರದಿಂದ ಬರ್ತಿದೆ. ಕೆಲವು ಜಿಲ್ಲೆಗಳಲ್ಲಿ ಲೋಪ ಆಗಿದೆ.. ಅಲ್ಲಿ ಕೆಲವು ಬಾಲ್ ಗಳು ಇವೆ. ಬಾಲ್ ಗಳು ಕಾಳಸಂತೆಯಲ್ಲಿ ಪಾಲುದಾರರು ಆಗಿರುವುದರಿಂದ ಸಮಸ್ಯೆ ಆಗಿದೆ. ರೈತರಿಗೆ ಬೇಕಾಗಿರುವ ಬೀಜ ಮತ್ತು ರಸಗೊಬ್ಬರ ಕಡಿಮೆ ಮಾಡಿಲ್ಲ. ಈ ಬಾರಿ ಬೇಗ ಮುಂಗಾರು ಬಂದಿರುವುದರಿಂದ ಜಾಸ್ತಿ ಖರ್ಚು ಆಗಿರಬಹುದು. ನಿಮ್ಮಲ್ಲಿರುವ ಕೆಲ ನ್ಯೂನತೆಗಳನ್ನ ಸರಿಪಡಿಸಿಕೊಳ್ಳಿ. ಅಧಿಕಾರಿಗಳು ಬಾಲ್ ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನಿಗೆ ಅತ್ಯಾಚಾರ ಕೇಸ್ ವಿಚಾರ
ಪ್ರಜ್ವಲ್ ರೇವಣ್ಣನಿಗೆ ಅತ್ಯಾಚಾರ ಕೇಸ್ ನಲ್ಲಿ ದೋಷಿ ಎಂದು ತೀರ್ಪು ಪ್ರಕಟ ವಿಚಾರಕ್ಕೆ ಪ್ರಕಟಿಸಿದ ಅವರು, ಒಂದು ನಾನದರ ಬಗ್ಗೆ ಚರ್ಚೆ ಮಾಡೋದಕ್ಕೆ ಹೋಗೋದಿಲ್ಲ ಇದೊಂದು ದುರಂತ. ಎಷ್ಟರ ಮಟ್ಟಿಗೆ ಸರಿ ಅನಿಸುವುದಕ್ಕಿಂತ ಹೆಚ್ಚಾಗಿ ಕಾನೂನನ್ನು ಗೌರವಿಸಬೇಕು. ಕಾನೂನಿನ ನೆಲೆಯಲ್ಲೆ ನಾವು ಬದುಕಬೇಕಾಗಿದೆ. ಅದಾಗಿರೊದರಿಂದ ಆಗಬಾರದಾಗಿತ್ತು ಇದೊಂದು ನೋವಿನ ಸಂಗತಿ ಇದನ್ನ ನಾವು ಸ್ವೀಕಾರ ಮಾಡ್ತೀವಿ ಎಂದರು.
ಲೋಕಸಭಾ ಚುನಾವಣಾಯಲ್ಲಿ ಅಕ್ರಮ ರಾಹುಲ್ ಗಾಂಧಿ ಹೇಳಿಕೆ ವಿಚಾರ
ಲೋಕಸಭಾ ಚುನಾವಣಾಯಲ್ಲಿ ಅಕ್ರಮವಾಗಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಗೆ ಮೊದಲು ದೇಶ ಏನು, ದೇಶ ನಡೆದು ಬಂದ ದಾರಿ ಏನು ತಿಳಿದುಕೊಳ್ಳಲಿ. ಅವರೇನು ಗೆದ್ದು ಬಂದವರಲ್ಲ. ನೂರು ಮೂವತೈದು ಅವರಿಗೆ ಹೇಗೆ ಬಂತು. ಮಿನಿಮಮ್ ಕಾಮನ್ ಸೆನ್ಸ್ ಇಲ್ಲದೆ ಇರೋರು ಮಾತಾಡುಬಹುದೇ ವಿನಃ, ಒಬ್ಬ ರಾಷ್ಟ್ರದ ವಿರೋಧ ಪಕ್ಷದ ನಾಯಕನಾಗಿ ನೆಹರೂ ಕುಟುಂಬದ ಕೊಂಡಿಯಾಗಿ ಅವರು ಏನು ಮಾತಾಡುತ್ತಿದ್ದಾರೆ. ಈ ದೆಶಕ್ಕೆ ಎಂತ ದುರಂತ ಅನ್ನೋದನ್ನ ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ. ದೇಶ ಏನು ರಾಷ್ಟ್ರದ ಪ್ರಧಾನಮಂತ್ರಿಗಳ ಬಗ್ಗೆ ರಾಷ್ಟ್ರದ ಕಾರ್ಯಕ್ರಮದ ಬಗ್ಗೆ ಏನು ಮಾಡಬೇಕು ಅನ್ನೋದು ಅವರಿಗೆ ತಿಳಿಯುತ್ತಿಲ್ಲ. ಲೋಕಸಭೆಯಲ್ಲಿ ಬಂದು ನಿಂತು ಒಂದು ಗಂಟೆ ಯಾವತ್ತಾದರೂ ಅವರು ನಿಂತು ಮಾತಾಡಿದ್ದಾರ ಕೇಳಿ. ಮೊದಲು ಅವರಿಗೆ ಪುಸ್ತಕ ಓದೋಕೆ ಹೇಳಿ. ಮೊದಲು ದೇಶವನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಹೇಳಿ. ದೇಶ ನಡೆದು ಬಂದ ದಾರಿ ನೋಡೋಕೆ ಹೇಳಿ. ನೂರನಲವತ್ತೆರಡು ಕೋಟಿ ದೇಶವಾಸಿಗಳನ್ನ ಈ ದೇಶದಲ್ಲಿ ಶಾಂತಿ ನೆಮ್ಮದಿಯನ್ನ ಕಾಪಾಡುಬೇಕು ಅನ್ನೋದನ್ನ ಚಿಂತನೆ ಇಲ್ಲ. ಇಂತಹ ಕ್ಷುಲ್ಲಕವಾದ ಹೇಳಿಕೆಯನ್ನ ಸಾಮಾನ್ಯ ಜನರು ಕೂಡ ಈ ಹೇಳಿಕೆ ಕೊಡದಿಲ್ಲ. ಅಂತ ಕ್ಷುಲ್ಲಕ ಹೇಳಿಕೆ ಕೊಟ್ಟು ರಾಹುಲ್ ಗಾಂಧಿ ನಗೆ ಪಾಟಲಿಗೆ ಈಡಾಗಿದ್ದಾರೆ ಎಂದು ಹೇಳಿದರು.