ಧರ್ಮಭೂಮಿ ಮತ್ತು ಕರ್ಮಭೂಮಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಸಂಪತ್ತು – ಡಿಸಿಪಿ ದೇವರಾಜ್

ಕೋಲಾರ : ಧರ್ಮಭೂಮಿ ಮತ್ತು ಕರ್ಮಭೂಮಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಸಂಪತ್ತುಯಾಗಿದೆ, ಶ್ರದ್ಧೆ ಮತ್ತು ಭಕ್ತಿಯ ದೇವರ ಧ್ಯಾನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ತಿಳಿಸಿದರು.

ತಾಲೂಕಿನ ನರಸಾಪುರ ಗ್ರಾಮದಲ್ಲಿ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಏರ್ಪಡಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯನಿಗೆ ಮೌಲ್ಯ ಅಧಾರಿತ ಶಿಕ್ಷಣ ಮತ್ತು ಜೀವನ ಬಹಳ ಮುಖ್ಯವಾಗಿದೆ ಪ್ರತಿಯೊಬ್ಬರೂ ಎಲ್ಲರ ಜೊತೆ ಒಂದಾಗಿ ಬಾಳುವ ಕಲೆಯನ್ನು ಕಲಿತುಕೊಳ್ಳಬೇಕು, ನಮ್ಮಲ್ಲಿ ಪ್ರೀತಿ, ದಯೆ, ಕರುಣೆ, ಕನಿಕರ, ತ್ಯಾಗ, ವಾತ್ಸಲ್ಯ ಮುಂತಾದ ಮಾನವೀಯ ಸದ್ಗುಣಗಳನ್ನು ಅಳವಡಿಸಿ ಅನುಸರಿಸಬೇಕಾಗುತ್ತದೆ, ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡರೆ ಆಧ್ಯಾತ್ಮಿಕತೆಯ ಮನೋಭಾವ ಬರುತ್ತದೆ ಎಂದು ತಿಳಿಸಿದರು,

ಗಣೇಶೋತ್ಸವ ಕಾರ್ಯಕ್ರಮದಲ್ಲಿ ಒಗ್ಗಟ್ಟಾಗಿರುವಂತೆ ಊರಿನಲ್ಲಿರುವ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನ ಮಂತ್ರವನ್ನು ಜಪಿಸಿ ಕಾರ್ಯ ಮಾಡಿದರೆ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಆಗ ಅಭಿವೃದ್ಧಿ ಸಾಧ್ಯ, ಪ್ರತಿಯೊಬ್ಬ ಮನುಷ್ಯ ಸಂಪ್ರದಾಯ ಮತ್ತು ಸಂಸ್ಕಾರವನ್ನು ಕಲಿತು ಬಾಳ ಬೇಕಾಗುವ ರಕ್ಷಣೆಗಳನ್ನು ಕಲಿಯಬೇಕು, ಇತ್ತೀಚಿನ ದಿನಗಳಲ್ಲಿ ಕೆಲವೊಂದು ನೀತಿ ನಿಯಮಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು‌

ಗಣೇಶೋತ್ಸವ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಸ್ಥಾನ 3 ಸಾವಿರ, ದ್ವಿತೀಯ ಸ್ಥಾನ 2 ಸಾವಿರ, ತೃತೀಯ ಸ್ಥಾನ 1 ಸಾವಿರ ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು,

ಈ ಸಂದರ್ಭದಲ್ಲಿ ನರಸಾಪುರ ಗ್ರಾಪಂ ಸದಸ್ಯ ಕೆ ಇ ಬಿ ಚಂದ್ರು ಮುಖಂಡರುಗಳಾದ ಖಾಜಿಕಲ್ಲಹಳ್ಳಿ ಹರೀಶ್, ಕಡಗಟ್ಟೂರು ವಿಜಯಕುಮಾರ್, ಬೆಳಮಾರನಹಳ್ಳಿ ಚಂದ್ರಶೇಖರ್, ನರಸಾಪುರ ಗ್ರಾಮದ ಲಟ್ಟು, ಟಿ. ಬಾಬು, ದುರ್ಗೇಶ್, ಪೃಥ್ವಿ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!