ಧರಣಿ ಪೋರ್ಟಲ್‌ ಸಮಸ್ಯೆ: ಜಮೀನನ್ನು “ಸೀಲಿಂಗ್ ಲ್ಯಾಂಡ್” ಪಟ್ಟಿಯಿಂದ ತೆಗೆದು ಹಾಕುವಂತೆ ಒತ್ತಾಯಿಸಿ ಹೆಡ್‌ಸ್ಟ್ಯಾಂಡ್ ಪ್ರತಿಭಟನೆ

ಧರಣಿ ಪೋರ್ಟಲ್‌ಗೆ ಸಂಬಂಧಿಸಿದ ತಮ್ಮ ಕುಟುಂಬದ ದೀರ್ಘಾವಧಿಯ ಭೂಮಿ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 26 ವರ್ಷದ ಯು.ಜೀವನ್ ಎಂಬ ವ್ಯಕ್ತಿಯೊಬ್ಬರು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ    ಇಬ್ರಾಹಿಂಪಟ್ಟಣ ಮಂಡಲದ ಕಚೇರಿಯಲ್ಲಿ 30 ನಿಮಿಷಗಳ ಕಾಲ ತಲೆ ಕೆಳಗೆ ಹಾಕಿ ಕಾಲು ಮೇಲೆ ಎತ್ತಿ(ಹೆಡ್‌ಸ್ಟ್ಯಾಂಡ್) ವಿಶಿಷ್ಚವಾಗಿ ಪ್ರತಿಭಟಿಸಿದರು.

ಐಐಐಟಿ ಹೈದರಾಬಾದ್‌ನ ಪದವೀಧರ ಮತ್ತು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ ಸ್ನಾತಕೋತ್ತರ ಪದವೀಧರರಾಗಿರುವ ಜೀವನ್, ಕಂದಾಯ ಅಧಿಕಾರಿಗಳಿಂದ ತ್ವರಿತವಾಗಿ ಸಮಸ್ಯೆ ಬಗೆಹರಿಯದ‌ ಕಾರಣ ಹಾಗೂ ವಿಳಂಬ, ನಿರ್ಲಕ್ಷ್ಯ ಧೋರಣೆ ಖಂಡಿಸಿ‌ ಹೊಸ‌ ವಿಧಾನದಿಂದ ಪ್ರತಿಭಟಿಸಿದರು.

ಜೀವನ್ ಅವರ ತಾಯಿ ಉಳಿಂತಲ ಜಯಸುಧಾ ಅವರು ಮೂರು ವರ್ಷಗಳಿಂದ ಮಂಗಲ್ಪಲ್ಲಿ ಗ್ರಾಮದ ತಮ್ಮ 1.32 ಎಕರೆ ಜಮೀನನ್ನು ನಿಷೇಧ ಪಟ್ಟಿಯಿಂದ ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ. 2020ರ ಸೆಪ್ಟಂಬರ್‌ನಲ್ಲಿ ಧರಣಿ ಪೋರ್ಟಲ್ ಕಾರ್ಯಾಚರಣೆಗೆ ಬಂದಾಗ ಸರ್ವೆ ಸಂಖ್ಯೆ 374 ರ ಅಡಿಯಲ್ಲಿ ಪಟ್ಟಿ ಮಾಡಲಾದ ಭೂಮಿಯನ್ನು “ಸೀಲಿಂಗ್ ಲ್ಯಾಂಡ್” ಎಂದು ಫ್ಲ್ಯಾಗ್ ಮಾಡಲಾಗಿತ್ತು. ಈ ನಡೆ ಯಾರೂ ಆ ಭೂಮಿಯನ್ನು ಬಳಸಂದತೆ ಸೂಚನೆ ನೀಡಲಾಗಿರುತ್ತದೆ.

15 ವರ್ಷಗಳ ಹಿಂದೆ ಮೆಟ್ಟು ಸೈದರೆಡ್ಡಿ ಎಂಬುವವರಿಂದ ಜಮೀನು ಖರೀದಿಸಿರುವುದಾಗಿ ಜಯಸುಧಾ ಹೇಳಿಕೊಂಡಿದ್ದಾರೆ.

ಹಲವು ಕುಂದುಕೊರತೆ ನಿವಾರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಇಬ್ರಾಹಿಂಪಟ್ಟಣ ಮಂಡಲ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದರೂ ಕುಟುಂಬದವರು ಪರಿಹಾರ ಕಂಡಿಲ್ಲ. ಅವರು ಸೇಲ್ ಡೀಡ್, ಆರ್‌ಡಿಒ ಕಚೇರಿಯಿಂದ “ಟ್ರೇಸ್ ಆಗದ” ದಾಖಲೆ ಮತ್ತು ವಕೀಲರ ಹುಡುಕಾಟ ವರದಿ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ, ಆದರೆ, ಭೂಮಿ ನಿಷೇಧದ ಪಟ್ಟಿಯಲ್ಲಿ ಉಳಿದಿದೆ.

ಸೀಲಿಂಗ್ ಜಮೀನಿನ ಸ್ಥಿತಿಯನ್ನು ಸ್ಪಷ್ಟಪಡಿಸಲು ತಹಶೀಲ್ದಾರ್ ಆರಂಭದಲ್ಲಿ ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ಅವರಿಂದ ದಾಖಲೆಗಳನ್ನು ಕೇಳಿದ್ದರು ಎಂದು ಜೀವನ್ ವಿವರಿಸಿದರು.

ಆದಾಗ್ಯೂ, ಇಷ್ಟೆಲ್ಲಾ ಪ್ರಯತ್ನಗಳು ನಡೆದರೂ ಸಮಸ್ಯೆ ಪರಿಹಾರಕ್ಕೆ ಇನ್ನೂ ಒಂದು ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಧರಣಿ ಪೋರ್ಟಲ್ ಸಮಸ್ಯೆಗಳನ್ನು 10 ದಿನಗಳಲ್ಲಿ ಪರಿಹರಿಸುವಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ, ಆದರೆ ಇನ್ನೂ ಒಂದು ತಿಂಗಳು ಕಾಯುವಂತೆ ನಮ್ಮನ್ನು ಕೇಳಲಾಗುತ್ತಿದೆ ಎಂದು ಜೀವನ್ ಅವರ ಸಹೋದರ ಜಯಪ್ರಕಾಶ್ ಹೇಳಿದರು.

ರಂಗಾ ರೆಡ್ಡಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಧರಣಿ ಕುಂದುಕೊರತೆಗಳು ಬಗೆಹರಿಯದಿದ್ದು, ತೆಲಂಗಾಣದಲ್ಲಿ ಭೂ ದಾಖಲೆಗಳ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ಪರಿಚಯಿಸಲಾದ ಧರಣಿ ವ್ಯವಸ್ಥೆಯಡಿ ಭೂ ಸಮಸ್ಯೆಗಳನ್ನು ಪರಿಹರಿಸುವ ನಿಧಾನಗತಿಯ ಬಗ್ಗೆ ಜೀವನ್ ಅವರ ಪ್ರತಿಭಟನೆಯು ಗಮನ ಸೆಳೆದಿದೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

12 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

22 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago