ಧಗ ಧಗ ಉರಿದು ಸುಟ್ಟು ಭಸ್ಮವಾದ ಹುಲ್ಲಿನ ಬಣವೆ: ಸುಮಾರು 70 ಸಾವಿರ ಮೌಲ್ಯದ 270 ಹುಲ್ಲಿನ ಹೊರೆ ಬೆಂಕಿಗಾಹುತಿ: ಸ್ಥಳದಲ್ಲಿ ಪೆಟ್ರೋಲ್ ತಂದಿದ್ದ ಬಾಟಲ್ ಪತ್ತೆ

ಕಿಡಿಗೇಡಿಗಳ ಕೃತ್ಯಕ್ಕೆ ಸುಮಾರು 70 ಸಾವಿರ ಮೌಲ್ಯದ 270 ಹುಲ್ಲಿನ ಹೊರೆಗಳ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಗಡ್ಡಂಬಚ್ಚಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳ‌ ಹಿಂದೆ ನಡೆದಿದೆ.‌ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಅಗ್ನಿ ಶಾಮಕ‌ ಸಿಬ್ಬಂದಿ ದೌಡಾಯಿಸಿ ಬೆಂಕಿ‌‌‌ನಂದಿಸುವ ಪ್ರಯತ್ನ‌ ಮಾಡಿದ್ದರೂ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.

ರೈತ ಮಂಜುನಾಥ್ ಅವರಿಗೆ ಸೇರಿದ ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ. ಜಾನುವಾರುಗಳಿಗೆ ಶೇಖರಿಸಿದ್ದ ಹುಲ್ಲಿನ ಬಣವೆ ಕಳೆದುಕೊಂಡ‌ ರೈತ ಕಂಗಾಲಾಗಿದ್ದಾನೆ. ಸ್ಥಳದಲ್ಲಿ ಪೆಟ್ರೋಲ್ ತಂದಿದ್ದ ಬಾಟಲ್ ಪತ್ತೆ ಕೂಡ ಪತ್ತೆಯಾಗಿದೆ. ಈ ಹಿನ್ನೆಲೆ ಯಾರೋ ಕಿಡಿಗೇಡಿಗಳು ಬೇಕಂತಲೇ ಹುಲ್ಲಿನ ಬಣವೆಗೆ ಕಿಡಿ‌ಹಚ್ಚಿದ್ದಾರೆ ಎಂಬ ಶಂಕೆ‌ ವ್ಯಕ್ತವಾಗಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇತ್ತೀಚಿಗೆ  ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಕುಂಟೆ ಗ್ರಾಮದಲ್ಲಿ ಬಡತನದಲ್ಲೂ ಲಕ್ಷಾಂತರ ರೂ. ವ್ಯಯ ಮಾಡಿ ರೇಷ್ಮೆ ಗೂಡು ಸಾಕಿದ್ದ‌ ಬಡ ಕುಟುಂಬ. ಇನ್ನೇನು ಒಂದೆರೆಡು ದಿನದಲ್ಲಿ ರೇಷ್ಮೆ ಗೂಡನ್ನ ಮಾರುಕಟ್ಟೆಗೆ ಹಾಕುವಷ್ಟರಲ್ಲಿ, ರಾತ್ರೋರಾತ್ರಿ ರೇಷ್ಮೆ ಗೂಡು ಇದ್ದ ಮನೆ ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಸಂಪೂರ್ಣ ಭಸ್ಮವಾಗಿತ್ತು. ಅದೇರೀತಿ ಕಾಡುಕುಂಟೆ ಗ್ರಾಮದ ಘಟನೆ ಮಾಸುವ ಮುನ್ನವೇ ಕುಕ್ಕಲಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಸುಮಾರು 8-10 ಲೋಡ್ ಜೋಳದ‌ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಸುಟ್ಟು ಕರಕಲಾಗಿದೆ. ತಾಲೂಕಿನಲ್ಲಿ ಇಂತಹ ಕುಕೃತ್ಯಗಳು ಮರುಕಳಿಸುತ್ತಿವೆ‌.

ಇಂತಹ ಕೃತ್ಯಗಳು ತಾಲೂಕಿನಲ್ಲಿ ಪದೇ ಪದೇ ಮರುಕಳಿಸುತ್ತಿವೆ. ಇದರಿಂದ ರೈತರು ಸಾಕಷ್ಟು‌ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಭಾಗಿಯಾಗುತ್ತಿರುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *