ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು. ಈ ಬಾರಿ ಒಟ್ಟು 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.
ಈ ಬಾರಿ 7,02,067 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 74.67% ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%), ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 9ನೇ ಸ್ಥಾನ (83.13%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ.
ಎಂದಿನಂತೆ ಬಾಲಕೀಯರೇ ಮೇಲುಗೈ ಸಾಧಿಸಿದ್ದು 80.25% ಪಾಸ್ ಆಗಿದ್ದರೆ ಬಾಲಕರು 69.05% ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ 74.79% ಮಕ್ಕಳು ತೇರ್ಗಡೆಯಾಗಿದ್ದರೆ 74.63% ನಗರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.