
ಕೋಲಾರ: ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಕೋಲಾರದ ಗಲ್‌ಪೇಟೆ ಠಾಣೆ ಪೊಲೀಸರು ಆತನಿಂದ ಸುಮಾರು 22.20 ಲಕ್ಷರೂ ಬೆಲೆಯ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ವಿ.ಕೋಟೆಯ ಎಸ್.ಸುಭಾನ್ ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಕೋಲಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಗುತ್ತಿದ್ದ ದ್ವಿಚಕ್ರ ವಾಹನಗಳ ಕಳುವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಎಸ್ಪಿ ಬಿ.ನಿಖಿಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್.ನಾಗ್ತೆ ನೇತೃತ್ವದಲ್ಲಿ ಗಲ್‌ಪೇಟೆ ಸಿಪಿಐ ಎಂ.ಜೆ.ಲೋಕೇಶ್, ಪಿಎಸ್‌ಐ ವಿಠಲ್ ತಳವಾರ್ ಹಾಗೂ ಎಎಸ್‌ಐ ಮುನಿವೆಂಕಟಸ್ವಾಮಿ, ಸಿಬ್ಬಂದಿ ಶಫೀಉಲ್ಲಾ, ರಮೇಶ್, ರಾಜೇಶ್, ಸದಾಶಿವ, ಮಂಜುನಾಥ ಅವರ ವಿಶೇಷ ತಂಡ ರಚಿಸಲಾಗಿತ್ತು.
ಆರೋಪಿಯನ್ನು ದಸ್ತಗಿರಿ ಮಾಡಲಾಗಿ ಆತನು ನೀಡಿದ ಮಾಹಿತಿಯ ಮೇರೆಗೆ ಕಳ್ಳತನ ಮಾಡಿದ್ದ ಸುಮಾರು 22.20.000 ರೂ. ಬೆಲೆ ಬಾಳುವ 6 ಬುಲೆಟ್, 1 ಆರ್15 ಯಮಹ, 1 ಸುಜುಕಿ, 1 ಆಕ್ಸಿಸ್, 1 ಆಕ್ಟಿವ, 1 ಪ್ಯಾಷನ್ ಫ್ರೋ ದ್ವಿಚಕ್ರ ವಾಹನಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯನ್ನು ಎಸ್ಪಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.