ಅಡ್ಡ ಬಂದ ನಾಯಿ ಬಚಾವ್ ಮಾಡಲು ಹೋಗಿ ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಕೊಂಗಾಡಿಯಪ್ಪ ಕಾಲೇಜು ಬಳಿ ಇಂದು ನಡೆದಿದೆ.
ಕರೇನಹಳ್ಳಿ ವಾಸಿ ನಂದಿನಿ(28) ಮೃತರು. ತನ್ನ ಸಂಬಂಧಿಕರ ಮಗುವಿನ ಸಮೇತ ಆಕ್ಟೀವಾ ಹೊಂಡದಲ್ಲಿ ತೆರಳುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ನಾಯಿಯನ್ನು ಬಚಾವ್ ಮಾಡಲು ಹೋಗಿ ಅದೇ ಹಾದಿಯಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಲಾಗಿದೆ ಎನ್ನಲಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಕೂಡಲೇ ಆಟೊದಲ್ಲಿ ಅಸ್ಪತ್ರೆಗೆ ಕರೆತರಲಾಯಿತು. ಆದರೆ, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೃತ ಮಹಿಳೆಯ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ನಂದಿನಿ ಅವರು ನಾಲ್ಕು ತಿಂಗಳಷ್ಟೆ ಮದುವೆಯಾಗಿ, ಮೂರು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.
ಹಿಂಬದಿ ಸವಾರರಾಗಿದ್ದ ಮತ್ತೊಬ್ಬ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.