ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಕಲ್ಲಪ್ಪ ಶಂಕರಪ್ಪ ಖರಾತ್ ನೇಮಕ

ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿ ಕಲ್ಲಪ್ಪ ಶಂಕರಪ್ಪ ಖರಾತ್ ನೇಮಕಗೊಂಡಿದ್ದಾರೆ.

ಈ ಹಿಂದೆ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ಅವರು ಲೋಕಸಭಾ ಚುನಾವಣಾ ನಿಮಿತ್ತ ದೊಡ್ಡಬೆಳವಂಗಲ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ವರ್ಗಾವಣೆ ಮಾಡಲಾಗಿತ್ತು. ಇವರ ಸ್ಥಾನಕ್ಕೆ ಅ.18ರಂದು ಡಿ.ಎಚ್.ಮುನಿಕೃಷ್ಣ ಅವರನ್ನು ಇನ್ಸ್ ಪೆಕ್ಟರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಈ ಆದೇಶವನ್ನು ಇಂದು ರದ್ದುಪಡಿಸಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರನ್ನಾಗಿ ಕಲ್ಲಪ್ಪ ಶಂಕರಪ್ಪ ಖರಾತ್ ಅವರನ್ನ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *