ದೊಡ್ಡಬಳ್ಳಾಪುರ ಬೈಪಾಸ್‌ಯಿಂದ ಹೊಸಕೋಟೆ ಸೆಕ್ಷನ್ ರಾಷ್ಟ್ರೀಯ ಹೆದ್ದಾರಿ–648 (ಹಳೇಯ ರಾಷ್ಟ್ರೀಯ ಹೆದ್ದಾರಿ-207)ರ ರಸ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ತಿಬೆಲೆ ಯಿಂದ ಹೊಸಕೋಟೆ (Four laning from km 74.270 to km 58.300) ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಭಾರೀ ವಾಹನಗಳು ಅಂದರೆ 3.75 ಮೀಟರ್‌ಗಿಂತ ಎತ್ತರವಾಗಿರುವ ವಾಹನಗಳು ಸದರಿ ಮಾರ್ಗದಲ್ಲಿ ಸಂಚರಿಸುವುದನ್ನು ನಿಷೇಧಿಸಿ, ಹೊಸ ಬೈಪಾಸ್ ರಸ್ತೆ (ರಾ.ಹೆ-648) ರಲ್ಲಿ ಸಂಚರಿಸಲು ಅನುವಾಗುವಂತೆ ಆದೇಶ ಹೊರಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರವರು ಕೋರಿರುವ ಮೇರೆಗೆ, The Karnataka motor vehicles rules 1989,Under rule 221(A)(5) ರಡಿಯಲ್ಲಿ ಆದೇಶ ಹೊರಡಿಸುವ ನಿಟ್ಟಿನಲ್ಲಿ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರೆ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ಸಾರ್ವಜನಿಕರು ಅಥವಾ ಯಾವುದೇ ವ್ಯಕ್ತಿಯು ಈ ಸಾರ್ವಜನಿಕ ಪ್ರಕಟಣೆ ಹೊರಡಿಸಿದ ದಿನದಿಂದ 15 ದಿನದೊಳಗಾಗಿ ಅಂದರೆ ದಿನಾಂಕ 2023ರ ಜುಲೈ 31 ರೊಳಗಾಗಿ ಸದರಿ ಉದ್ದೇಶದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ರವರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ರವರಿಗೆ ಲಿಖಿತವಾಗಿ ಅಥವಾ ಈ ಕಛೇರಿಯ ಇ-ಮೇಲ್ ವಿಳಾಸ deo.bangalorer3@gmail.com ಗೆ ಸಲ್ಲಿಸಬಹುದಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.