ದೊಡ್ಡಬಳ್ಳಾಪುರ ತಾಲೂಕಿನ ಎಸ್ಎಸ್ಎಲ್ ಸಿ ಟಾಪರ್ ವಿನಯ್ ಪ್ರಕಾಶ್

2023ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೇಯಲ್ಲಿ 625‌ ಅಂಕಗಳಿಗೆ 618 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗುವ ಮೂಲಕ ತಾಲೂಕು, ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿರುವ ತಾಲೂಕಿನ ದೇವಲ ಮಹರ್ಷಿ ಶಾಲಾ ವಿದ್ಯಾರ್ಥಿ ವಿನಯ ಪ್ರಕಾಶ್.

ಮೇ.8ರಂದು‌ 2023ರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಫಲಿತಾಂಶದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಎಲ್ಲರ ಅಭಿನಂದನೆಗೆ ಪಾತ್ರನಾಗಿರುವ ವಿನಯ್ ಪ್ರಕಾಶ್.

ವಿನಯ್ ಇಷ್ಟಪಟ್ಟು ಅಭ್ಯಾಸ ಮಾಡಿ ತಾಲೂಕಿಗೆ ಒಳ್ಳೆ ಫಲಿತಾಂಶ ತಂದಿರುವುದು ಸಂತಸ ತಂದಿದೆ. ಮನೆಯಲ್ಲಿ ನಾವು ಓದು ಎಂದು ಎಂದೂ ಒತ್ತಡ ಹೇರಲಿಲ್ಲ. ಎಲ್ಲೂ ಟ್ಯೂಷನ್ ಗೆ ಹೋಗದೆ, ಶಾಲಾ ಶಿಕ್ಷಕರು‌ ಹೇಳಿಕೊಟ್ಟ ಪಾಠ ಹಾಗೂ ಮನೆಯಲ್ಲಿ ಉತ್ತಮ‌ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ ಎಂದು ಟಾಪರ್ ವಿನಯ್ ಪ್ರಕಾಶ್ ತಂದೆ ಪ್ರಕಾಶ್ ಮಗನ‌ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ನಂತರ ಟಾಪರ್ ವಿನಯ್ ಪ್ರಕಾಶ್ ಮಾತನಾಡಿ, ಈ ಸಾಧನೆಗೆ ನನ್ನ ಶಿಕ್ಷಕರು, ಪೋಷಕರು ಕಾರಣ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇನ್ನೂ ಹೆಚ್ಚು ಅಂಕ ಬರಬಹುದು ಎಂದು ನಿರೀಕ್ಷಿಸಿದ್ದೆ‌ ಆದರೆ 618 ಅಂಕ‌ ಬಂದಿರುವುದು ಖುಷಿಕೊಟ್ಟಿದೆ, ಮುಂದಿನ‌ ವಿದ್ಯಾಭ್ಯಾಸದಲ್ಲಿ ಇನ್ನೂ ಕಠಿಣ ಪರಿಶ್ರಮದಿಂದ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸುವೆ ಎಂದು‌ ತಿಳಿಸಿದರು.

ಭವಿಷ್ಯದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಮಾಡುವ ಬಯಕೆ ಇದೆ, ಈ‌ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡುತ್ತೇನೆ, ಓದುವ ಜೊತೆ ಪೆನ್ಸಿಲ್ ಸ್ಕೆಚ್, ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತೇನೆ ಎಂದರು.

ಮಗನ‌‌ ಈ ಸಾಧನೆಗೆ ಆನಂದದಲ್ಲಿ ಮಿಂದೆದ್ದ ಪೋಷಕರು.

Leave a Reply

Your email address will not be published. Required fields are marked *