ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಂಒಬಿ ಪರೇಡ್

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿಂದು ಡಿವೈಎಸ್ಪಿ ಪಾಂಡುರಂಗ ಹಾಗೂ ಇನ್ ಸ್ಪೆಕ್ಟರ್ ಸಾದಿಕ್ ಪಾಷ ನೇತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲ್ಲಾ ಎಂಒಬಿಗಳ ಪರೇಡ್ ನಡೆಯಿತು.

ಈ ವೇಳೆ‌ ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ರಾತ್ರಿ ಕಳ್ಳತನ ಮಾಡಿ ಬೆಳಿಗ್ಗೆ ಡ್ಯೂಟಿ ಅಂತ ಹೇಳಿದ್ರೆ ಪೋಲಿಸರು ಸುಮ್ಮನಿರಲ್ಲ. ಹಳೇ ಕಳ್ಳರ ಮೇಲೂ ಪೊಲೀಸರ ನಿಗಾ ಇದ್ದೆ ಇರುತ್ತದೆ ಎಂದರು.

ಯಾವುದೇ ರೀತಿಯ ‌ಕಾನೂನು‌ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ. ಸಮಾಜದಲ್ಲಿ ಉತ್ತಮ‌ ಕೆಲಸವನ್ನು ‌ಮಾಡಿ. ಸಮಾಜದಲ್ಲಿ ಗೌರವಯುತವಾಗಿ ಬಾಳಲು ಪ್ರಯತ್ನಿಸಬೇಕು. ಅದಕ್ಕೆ ನಾವು ಕೂಡ ಸಹಾಯ ಮಾಡುತ್ತೇವೆ ಎಂದರು.

ಕಳ್ಳರ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್ ಠಾಣೆಗೆ ತಿಳಿಸುವಂತೆ ಹಳೇ ಕಳ್ಳರಿಗೆ ಸಲಹೆ ನೀಡಿದರು.

ಸಮಾಜದ ಶಾಂತಿಗೆ ಧಕ್ಕೆ‌ಯಾಗದಂತೆ ಇರಬೇಕು. ಯಾವುದೇ ಅಕ್ರಮ ಕೆಲಸದಲ್ಲಿ ‌ಭಾಗಿಯಾದರೆ ಅವರ ಮೇಲೆ ಕ್ರಮವಹಿಸಲಾಗುತ್ತದೆ‌ ಎಂದರು.

ಈ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!