
ಅಕ್ರಮವಾಗಿ ಭಾರತಕ್ಕೆ ನುಸುಳಿ ಹಲವಾರು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ನೈಜೀರಿಯ ಪ್ರಜೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ ಪಾಷಾ ಅವರ ನೇತೃತ್ವದಲ್ಲಿ ಸಿಬ್ಬಂದಿ ಸುನೀಲ್, ಹರೀಶ್, ಸಚಿನ್ ಹಾಗೂ ಪ್ರವೀಣ್ ತಂಡ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಕಲಿ ಪಾಸ್ ಪೋರ್ಟ್ ಬಳಿಸಿ ಬಂದಿರುವುದಾಗಿ ದೃಢಪಟ್ಟಿದೆ.

ನಂತರ ಸದರಿ ಆಸಾಮಿಯನ್ನು ಸ್ವಂತ ದೇಶಕ್ಕೆ ಹಸ್ತಾಂತರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.