ದೊಡ್ಡಬಳ್ಳಾಪುರ-ಎಸ್.ಎಸ್.ಘಾಟಿ ಮಾರ್ಗದ KSRTC ಬಸ್ ಫುಲ್ ರಶ್: ವಿದ್ಯಾರ್ಥಿಗಳ ಪರದಾಟ

ದೊಡ್ಡಬಳ್ಳಾಪುರ-ಎಸ್ ಎಸ್ ಘಾಟಿ ಮಾರ್ಗದ KSRTC ಬಸ್ ಬೆಳಗ್ಗೆ 8ಗಂಟೆ ಸಮಯದಲ್ಲಿ ಫುಲ್ ರಶ್ ಆಗಿದ್ದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಹೋಗಲು ಆಗದೇ ಪರದಾಡುವಂತಾಗಿತ್ತು.

ಇಂದು ಮಂಗಳವಾರ ಆದ್ದರಿಂದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ‌ ಪಡೆದು ಬಸ್ ಹತ್ತಿದ್ದರು. ಈ ಹಿನ್ನೆಲೆ ಬಸ್ ಫುಲ್ ರಶ್ ಆಗಿ ವಿದ್ಯಾರ್ಥಿಗಳಿಗೆ ಜಾಗ ಇಲ್ಲದಂತಾಗುತ್ತು.

ಹೆಚ್ಚುವರಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಘಟಕ ವ್ಯವಸ್ಥಾಪಕ ಎಸ್.ಆರ್ ಸಂತೋಷ್, ಇಂದು ಮಂಗಳವಾರವಾದ್ದರಿಂದ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚಿಗೆ ಸಂಖ್ಯೆಯಲ್ಲಿ ಬಂದಿದ್ದು ಈ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಶೀಘ್ರದಲ್ಲೇ ಈ ತೊಂದರೆ ಬಗೆಹರಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಘಟಕ ವ್ಯವಸ್ಥಾಪಕ ಎಸ್.ಆರ್ ಸಂತೋಷ್ ಅವರಿಗೆ ಮನವಿ ಪತ್ರ ಸಲ್ಲಿಸಿದ ವಿದ್ಯಾರ್ಥಿಗಳು

Leave a Reply

Your email address will not be published. Required fields are marked *