ದೊಡ್ಡಬಳ್ಳಾಪುರದ ಕೆ.ಎಂ ನಂಜುಂಡೇಶ್ವರ ನಿರ್ಮಾಣದ ಶ್ರೀ ಮಾರಮ್ಮ ದೇವಿ ಕುರಿತ ಭಕ್ತಿಪ್ರಧಾನ ಕಥೆ ಆಧರಿಸಿದ ‘ಸಿಂಹರೂಪಿಣಿ’ ಸಿನಿಮಾ ಅ.17ಕ್ಕೆ ಬಿಡುಗಡೆ

ಕಿನ್ನಾಳ್‌ ರಾಜ್ ನಿರ್ದೇಶನದ ಶ್ರೀ ಮಾರಮ್ಮ ದೇವಿ ಕುರಿತ ಸಾಮಾಜಿಕ ಮತ್ತು ಭಕ್ತಿಪ್ರಧಾನ ಕಥೆ ಆಧರಿಸಿದ ‘ಸಿಂಹರೂಪಿಣಿ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಅ. 17ರಂದು ರಾಜ್ಯಾದ್ಯಂತ ಹಲವು ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದೆ.

ಭಕ್ತಿ ಪ್ರಧಾನ ಚಿತ್ರಕ್ಕೆ ಕಿನ್ನಾಳ್‌ರಾಜ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು, ದೊಡ್ಡಬಳ್ಳಾಪುರದ ಕೆ.ಎಂ. ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್‌ಕುಮಾ‌ರ್ ಛಾಯಾಗ್ರಹಣ, ವೆಂಕಿ.ಯು.ವಿ ಸಂಕಲನ, ಕಿಶೋ‌ರ್ ಕಲರಿಸ್ಟ್, ಸಾಹಸ ಗ್ರಿಲ್ಲರ್‌ಮಂಜು-ಚಂದ್ರು ಬಂಡೆ- ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಇವರುಗಳ ಶ್ರಮದಿಂದ ಈ ಚಿತ್ರ ಮೂಡಿಬಂದಿದೆ.

ನಟ ಸುಮನ್, ಯಶ್‌ ಶೆಟ್ಟಿ, ಅಂಕಿತಾ ಗೌಡ, ಯಶಸ್ವಿನಿ, ಹರೀಶ್ ರಾಯ್, ನೀನಾಸಂ ಅಶ್ವತ್ಥ್​, ದಿವ್ಯಾ ಆಲೂರು, ವಿಜಯ್‌ ಚೆಂಡೂರು, ಖುಷಿ ಬಸ್ರೂರು ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಹಿರಿಯ ಕಲಾವಿದರು ಸೇರಿದಂತೆ 120ಕ್ಕೂ ಹೆಚ್ಚು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಶ್ರೀ ಮಾರಮ್ಮ ದೇವಿ ಕುರಿತ ಸಾಮಾಜಿಕ ಮತ್ತು ಭಕ್ತಿಪ್ರಧಾನ ಕಥೆ ಈ ಸಿನಿಮಾದಲ್ಲಿ ಇದೆ. ಬಹಳ ವರ್ಷಗಳ ನಂತರ ಮತ್ತೊಮ್ಮೆ ದೇವಿ ಶಕ್ತಿ, ಪವಾಡ, ಭಕ್ತವೃಂದ ಕಥಾನಕವನ್ನು ಬೆಳ್ಳಿ ಪರದೆ ಮೇಲೆ ನೋಡುವ ಅವಕಾಶ ಒದಗಿ ಬಂದಿದೆ. ಪ್ರೇಕ್ಷಕರು ಅಮ್ಮನ ಮಕ್ಕಳಾಗಿ ಚಿತ್ರಮಂದಿರಕ್ಕೆ ಬರಬೇಕು ಎಂದು ನಿರ್ಮಾಪಕ ಕೆ.ಎಂ. ನಂಜುಡೇಶ್ವರ ಹೇಳಿದ್ದಾರೆ.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಏನೇ ಕಷ್ಟ ಬಂದರೂ ಜನರು ದೇವರಿಗೆ ಮೊರೆ ಹೋಗುತ್ತಾರೆ. ಜಾತ್ರೆ, ಉತ್ಸವದಲ್ಲಿ ಇನ್ನೂ ನಂಬಿಕೆ ಉಳಿದಿದೆ ಎಂಬಂತಹ ವಿಷಯಗಳನ್ನು ಪಾತ್ರಗಳ ಮೂಲಕ ತೋರಿಸುತ್ತಿದ್ದೇವೆ. ಎಲ್ಲ ದೇವರಿಗೂ ಹಿನ್ನೆಲೆ ಇರುತ್ತದೆ. ಅದೇ ರೀತಿ, ದೇವಿಯು ಮಹಾಲಕ್ಷೀ ರೂಪದಲ್ಲಿ ಭೂಮಿಗೆ ಬಂದು, ನಂತರ ಮಾರಮ್ಮ ಆಗುತ್ತಾಳೆ. ರಾಕ್ಷಸರ ಸಂಹಾರಕ್ಕೆ ಪಾರ್ವತಿದೇವಿ 7 ಅವತಾರದಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರವೇ ಮಾರಮ್ಮ ದೇವಿ. ಇವುಗಳ ಜತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನೂ ಸೇರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಈ ವೇಳೆ ಸಿ.ವಿ ಶ್ರಿನಿವಾಸ್, ಸಾಗರ್ ಗೌಡ, ಯಶಸ್ವಿನಿ ಸಿದ್ದೇಗೌಡ, ಪಿಳ್ಳಪ್ಪ, ಕೆಂಪರಾಜು, ಸಿ.ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ಮಕ್ಕಳ ಸಂಕಷ್ಟದ ಬದುಕಿಗೆ ಮುಕ್ತಿ: ಪಾಲಕರಿದ್ದರೂ ಅನಾಥರಂತಿದ್ದ ಮೂವರು ಮಕ್ಕಳ ರಕ್ಷಣೆ

ದೇಗುಲದ ಪ್ರಸಾದದಿಂದ ಹೊಟ್ಟೆ ತುಂಬಿಸಿಕೊಳ್ಳುವುದು, ದೇವಸ್ಥಾನದ ಬೀದಿಯಲ್ಲಿ ಭಿಕ್ಷಾಟನೆ ಮಾಡುವುದು, ರಾತ್ರಿ ವೇಳೆ ಬಂಡೆಗಳ ಪೊಟರೆ ಹಾಗೂ ಪೊದೆಗಳ ನಡುವೆ…

52 minutes ago

ಸಿನಿಮಾ…. ಸೋಲು, ಗೆಲುವಿನ ಸುತ್ತಾ…..

ಟಾಕ್ಸಿಕ್ ಎಂಬ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದ ಕೆಲವೇ ದಿನಗಳ ನಂತರ ಪ್ರೇಮದ ಊರಲಿ ಎಂಬ ಸಿನಿಮಾ ಸ್ವಲ್ಪ ಮಟ್ಟಿಗೆ…

7 hours ago

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

19 hours ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

20 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

24 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

1 day ago