ದೊಡ್ಡಬಳ್ಳಾಪುರದಲ್ಲಿ‌ ಶೇ 80.13ರಷ್ಟು ಮತದಾನ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯು ಸುಸೂತ್ರ ಹಾಗೂ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಸಂಜೆ 6ರ ವೇಳೆಗೆ ಶೇ. 80.13ರಷ್ಟು ಮತದಾನವಾಗಿದೆ. ಮತದಾರರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು, ಶಾಂತಿಯುತವಾಗಿ ಹಕ್ಕು ಚಲಾಯಿಸಿದ್ದಾರೆ.

ಕ್ಷೇತ್ರದ ಒಟ್ಟು 1,08,921 ಪುರುಷ ಮತದಾರರು, 1,11,346 ಮಹಿಳಾ ಮತದಾರರ ಪೈಕಿ 88,663 ಪುರುಷರು, 87,835 ಮಹಿಳೆಯರು ಸೇರಿದಂತೆ ಒಟ್ಟು 1,76,498 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಳಿಗ್ಗೆ 10 ಗಂಟೆ ಹೊತ್ತಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ  ಕೇವಲ ಶೇ 10 ರಷ್ಟು ಮತದಾನ ದಾಖಲಾಗಿತ್ತು. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ಶೇ 20 ರಷ್ಟು ಮತದಾನ ದಾಖಲಾಯಿತು.

ಮಧ್ಯಾಹ್ನ 1ರಿಂದ 3.30ರವರೆಗೆ ಮತ್ತೆ ಶೇ 19 ರಷ್ಟು ಮತದಾನ ಏರಿಕೆಯಾಯಿತು. 3.30ರಿಂದ ಸಂಜೆ 5.30 ರವರೆಗೆ ಶೇ 18 ರಷ್ಟು ಮತದಾನ ಹೆಚ್ಚಳವಾಯಿತು. ಸಂಜೆ 5 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 77.20 ರಷ್ಟು ಮತದಾನ ದಾಖಲಾಗಿತ್ತು. ಮತದಾನ ಮುಗಿಯವ ವೇಳೆಗೆ ಒಟ್ಟಾರೆ ಜಿಲ್ಲೆಯಲ್ಲಿ ಶೇ.81.90 ರಷ್ಟು ಮತದಾನ ನಡೆದಿದೆ.

ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ

178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 86.44%

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 82.69%

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 80.13%

181-ನೆಲಮಂಗಲ ವಿಧಾನಸಭಾ ಕ್ಷೇತ್ರ: 77.98%

Leave a Reply

Your email address will not be published. Required fields are marked *