ದೊಡ್ಡಬಳ್ಳಾಪುರದಲ್ಲಿ ಪಂಚರತ್ನ ರಥಯಾತ್ರೆಯನ್ನು ಸ್ವಾಗತಿಸಲು ಸಿದ್ಧತೆ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ‘ಪಂಚರತ್ನ’ ರಥಯಾತ್ರೆಯು ನ. 29ರಂದು ತಾಲೂಕಿಗೆ ಕಸಬಾ ಹೋಬಳಿಯ ನಾಗದೇನಹಳ್ಳಿ ಗ್ರಾಮದ ಮೂಲಕ ಪ್ರವೇಶಿಸಲಿದ್ದು, ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ಬೃಹತ್ ಸಮಾವೇಶ ಮುಖಾಂತರ ಕೊನೆಗಳ್ಳಲಿದೆ. ತಾಲೂಕಿಗೆ ಕುಮಾರಸ್ವಾಮಿ ಆಗಮನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

ಜೆಡಿಎಸ್ ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ:

ವಿಧಾನಸಭೆ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ ರಣಕಹಳೆ ಮೊಳಗಿಸಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಇಂದು ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿದ್ದಾರೆ. ಮತ್ತೊಮ್ಮೆ ನೆಚ್ಚಿನ ನಾಯಕರು ಕ್ಷೇತ್ರಕ್ಕೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಗ್ರಾಮೀಣ ಭಾಗಕ್ಕೆ ಆಗಮಿಸುತ್ತಿದ್ದಾರೆ. ರೈತರ ಗಮನ ಸೆಳೆದು ಪಾಂಚಜನ್ಯ ಮೊಳಗಿಸಲು ತಾಲೂಕಿನ ಜೆಡಿಎಸ್ ಮುಖಂಡರು ರಣತಂತ್ರ ರೂಪಿಸಿದ್ದಾರೆ.

800 ಬೈಕ್, ಬೃಹತ್‌ಹಾರಗಳ ಮೂಲಕ ಸ್ವಾಗತ:

ಹೆಚ್‌ಡಿಕೆ ಸಾರಥ್ಯದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಮೂಲಕ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ನಿರ್ಧರಿಸುವ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೋರಲು ತಾಲೂಕು ಜೆಡಿಎಸ್ ಮುಖಂಡರು ಸಕಲ ಸಿದ್ಧತೆ ನಡೆಸಿದ್ದಾರೆ. ಬರೋಬ್ಬರಿ 800 ಬೈಕ್, ಒಂದು ಬೃಹತ್ ಜೋಳದ ಹಾರ, ಮೂರು ಮೆಣಸಿನಕಾಯಿ ಹಾರ, ಒಂದು ತುಳಸಿಹಾರ, ಆಪಲ್ ಹಾರ ಸೇರಿದಂತೆ ಹೂಮಾಲೆ ಹಾಕಲಿದ್ದಾರೆ. ಹೆಚ್‌ಡಿಕೆ ಸಂಚರಿಸುವ ಮಾರ್ಗದುದ್ದಕ್ಕೂ ಕಾರ್ಯಕರ್ತರಿಗಾಗಿ ಊಟ, ನೀರಿನ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.

ಒಂದಾದ ಜೆಡಿಎಸ್ ನಾಯಕರು:

ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಸಂಖ್ಯೆ ಉಳಿದೆರಡು ರಾಷ್ಟೀಯ ಪಕ್ಷಗಳಿಗಿಂತ ಹೆಚ್ಚಿಗೆ ಇದ್ದಾರೆ. ಆದರೆ ವಿಧಾನಸಭೆ ಚುನಾಚಣೆ ಸಂದರ್ಭಗಳಲ್ಲಿ ನಾಯಕರಲ್ಲಿ ಉಂಟಾಗುವ ಕೋಪ, ರಾಜಕೀಯ ದ್ವೇಷ, ಮುನಿಸುಗಳಿಂದ ಸೃಷ್ಠಿಯಾಗುವ ಬಣ ರಾಜಕೀಯದಿಂದ ಕಳೆದೆರೆಡು ಚುನಾವಣೆಯಲ್ಲಿ ಸೋಲುಂಟಾಗಿದೆ. ಸೂಕ್ತ ನಾಯಕ್ವವಿಲ್ಲದೆ ಕೊರಗುತ್ತಿರುವ ಕಾರ್ಯಕರ್ತರಿಗೆ ಈ ಬಾರಿ ಎಲ್ಲವೂ ಸರಿಹೋಗುವ ನಿರೀಕ್ಷೆ ಗರಿಗೆದರಿದೆ. ಇದಕ್ಕೆ ಸಾಕ್ಷಿ ಪಂಚರತ್ನ ಯಾತ್ರೆ ಸ್ವಾಗತಕ್ಕೆ ತಾಲೂಕಿನ ಎಲ್ಲಾ ಕಿರಿಯ, ಹಿರಿಯ ಕಾರ್ಯಕರ್ತರು ಒಗ್ಗಟ್ಟಿನಿಂದ ಒಂದಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿರುವುದು.

ಭಿನ್ನಮತ ಶಮನಕ್ಕೆ ಹೆಚ್‌ಡಿಕೆ ಮುಲಾಮು:

ತಾಲೂಕಿನ ಜೆಡಿಎಸ್ ಮುಖಂಡರಲ್ಲಿನ ಮುಸುಕಿನ ಗುದ್ದಾಟವನ್ನು ಶಮನ ಮಾಡುವ ನಿಟ್ಟಿನಲ್ಲಿ ಕುಮಾರಸ್ವಾಮಿ ಹೆಜ್ಜೆ ಇಟ್ಟಿದ್ದಾರೆ. ಈ ದಿಸೆಯಲ್ಲಿ ತಾಲೂಕಿನ ಎಲ್ಲಾ ನಾಯಕರು ಒಂದಾಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದರೆ ಮಾತ್ರ ನಾನು ನಿಮ್ಮ ತಾಲೂಕಿಗೆ ಬರಲಿದ್ದೇನೆ. ನಿವೆಲ್ಲಾ ಒಂದಾದರೆ ಮಾತ್ರೆ ಜೆಡಿಎಸ್ ಗೆಲ್ಲಲು ಸಾಧ್ಯ ಎಂದು ಖಡಕ್ ಸೂಚನೆ ಕೊಟ್ಟಿರುವ ಹೆಚ್‌ಡಿಕೆ, ಪಂಚರತ್ನ ಯಾತ್ರೆ ವೇಳೆ ನಾಯಕರಲ್ಲಿನ ಭಿನ್ನಮತಕ್ಕೆ ತೆರೆ ಎಳೆಯುವ ಭರವಸೆ ಮೂಡಿದೆ.

ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಎದುರಾಳಿ:
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿಯೂ ದೇವೇಗೌಡರ ಬೆಂಬಲಿಗರು ಜನತಾದಳದಿಂದ ಗೆಲುವು ಸಾಧಿಸಿದ್ದರು. ಈ ಹಿಂದಿನ ನಗರ ಸ್ಥಳೀಯ ಸಂಸ್ಥೆಗಳು, ವಿಧಾನ ಪರಿಷತ್, ವಿಧಾನಸಭೆ ಚುನಾವಣೆಗಳ ಮತ ಗಳಿಕೆಯ ಲೆಕ್ಕ ನೋಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ.

ತಾಲೂಕಿನಲ್ಲಿ ಜೆಡಿಎಸ್‌ಗೆ ಉತ್ತಮ ನೆಲೆ ಇದೆ. ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ಕಳೆದೆರೆಡು ಚುನಾವಣೆಯಲ್ಲಿ ನಾಯಕರಲ್ಲಿನ ಹೊಂದಾಣಿಕೆ ಕೊರತೆಯಿಂದ ಸೋಲುಂಟಾಗಿತ್ತು. ಪಂಚರತ್ನ ಯಾತ್ರೆ ಮೂಲಕ ತಾಲೂಕಿನಲ್ಲಿ ಚುನಾವಣಾ ಕಾವು ಮತ್ತಷ್ಟು ಏರಲಿದೆ. ಈ ಬಾರಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ  ಎಂದು ಜೆಡಿಎಸ್ ಮುಖಂಡ ಹುಸ್ಕೂರು ಆನಂದ್ ಹೇಳಿದರು.

ನಮ್ಮ ನಾಯಕ ಕುಮಾರಸ್ವಾಮಿ ಸೂಚನೆಯಂತೆ ಎಲ್ಲಾ ನಾಯಕರೂ ಒಂದಾಗಿ ಚುನಾವಣೆ ಎದುರಿಸಲಿದ್ದೇವೆ. 30 ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್ ಬಾವುಟ ಹಾರಿಲ್ಲ. ಈ ಬಾರಿ ಯಾವುದೇ ಗೊಂದಲವಿಲ್ಲದೆ ಜೆಡಿಎಸ್ ಗೆಲ್ಲಿಸುವ ಕೆಲಸ ಎಲ್ಲಾ ನಾಯಕರು ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹರೀಶ್ ಗೌಡ ತಿಳಿಸಿದರು.

Ramesh Babu

Journalist

Recent Posts

“ಗುರಿ” ಇಟ್ಟ ದೊಡ್ಡಬಳ್ಳಾಪುರ ಪ್ರತಿಭೆ ಮಹಾನಿಧಿ

ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿ ಮೊದಲಾದ ಅಂಶಗಳು ಒಳಗೊಂಡಿರುವ 'ನನ್ನ ಶಾಲೆಯನ್ನು ಪ್ರೀತಿಸುತ್ತೇನೆ' ಎಂಬ…

20 minutes ago

ನೇಪಾಳದ ದಂಗೆ……

ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ…

6 hours ago

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

9 hours ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

20 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

20 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

24 hours ago