ದೈಹಿಕ‌ ಹಾಗೂ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರಲು‌ ಯೋಗ ಅತಿಮುಖ್ಯ- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸದಾಶಿವ ರಾಮಚಂದ್ರಗೌಡ

ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯವನ್ನ ಸುಸ್ಥಿರದಲ್ಲಿಡಬೇಕಂದರೆ ಮನುಷ್ಯನಿಗೆ ಯೋಗಾಭ್ಯಸ ಬಹಳ ಮುಖ್ಯವಾಗಿದೆ ಎಂದು ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ‌ ಭಾಗವಹಿಸಿ ಅವರು ಮಾತನಾಡಿದರು.

ಯೋಗವು ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ನಾವೆಲ್ಲರೂ ಶತಾಯುಷಿಗಳಾಗಿ ಬದುಕಲು ಸಾಧ್ಯವಿದೆ. ಇಂದು ಯುವಕರು ನಿರುತ್ಸಾಹಿಗಳಾಗಿ ಬದುಕುತ್ತಿದ್ದು, ಅವರನ್ನ ಉತ್ಸಾಹಶೀಲಾರನ್ನಾಗಿ ಮಾಡಲು ಯೋಗ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ಯೋಗಭ್ಯಾಸ ಮಾಡುವುದನ್ನ ಅಳವಡಿಸಿಕೊಳ್ಳಬೇಕು ಎಂದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿ,  ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯೋಗವನ್ನ ಪರಿಚಯಿಸಿ, ದೇಶದ ಪರಿಕಲ್ಪನೆಯನ್ನ ಸಾರುತ್ತಿರುವುದು ಹೆಮ್ಮೆಪಡುವ ಸಂಗತಿಯಾಗಿದೆ. ನಮ್ಮ ಅರೋಗ್ಯವನ್ನ ಸಶಕ್ತವಾಗಿಟ್ಟುಕೊಳ್ಳಲು ಯೋಗ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಯೋಗಾಪಟು ಹಾಗೂ ವಿದ್ಯಾರ್ಥಿ ಚೇತನ್ ರಾಮ್ ಮಾರ್ಗದರ್ಶನದಲ್ಲಿ  ಯೋಗಭ್ಯಾಸ ನಡೆಸಲಾಯಿತು.

ಈ ವೇಳೆ ಉಪನ್ಯಾಸಕರಾದ ಸಿದ್ದರಾಮರಾಜು, ಪ್ರೊ. ನೀರಜಾ ದೇವಿ, ಡಾ.ಪ್ರಕಾಶ್ ಮಂಟೆದ, ರಾಜ್ ಕುಮಾರ್, ಮಂಜುನಾಥ್, ಕಾಲೇಜಿನ NSS, NCC ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *