ದೇಹದ ಸಮಸ್ಯೆಗಳಲ್ಲಿ ಮಧುಮೇಹ ರೋಗವೂ ಒಂದು: ರೋಗಕ್ಕೆ ಶಾಶ್ವತ ಪರಿಹಾರ ಇಲ್ಲವಾದರೂ ನಿಯಂತ್ರಿಸಬಹುದು- ಡಾ.ಹುಲಿಕಲ್ ನಟರಾಜ್

ದೇಹದ ಸಮಸ್ಯೆಗಳಲ್ಲಿ ಮಧುಮೇಹ ರೋಗವೂ ಒಂದು. ಜಾಗೃತಿ ಹಾಗೂ ಮಿತ ಆಹಾರ ದೈಹಿಕ ಶ್ರಮ ಹಾಗೂ ಸದೃಢ ಮನಸ್ಸನ್ನು ಹೊಂದಿದರೆ ಮಧುಮೇಹ ಖಂಡಿತ ನಮ್ಮ ಬಳಿ ಸುಳಿಯುವುದಿಲ್ಲ. ನಾವು ಎಷ್ಟು ಯಾಂತ್ರಿಕವಾಗಿ, ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಮಧುಮೇಹ  ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ, ನಿಯಂತ್ರಿಸಬಹುದು ಎಂದು ಡಾ.ಹುಲಿಕಲ್ ನಟರಾಜ್ ಹೇಳಿದರು.

ನಗರದ ಲಯನ್ಸ್ ಕ್ಲಬ್ ಕಚೇರಿಯಲ್ಲಿ ನಡೆದ 61ನೇ ಮಾಸಿಕ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು  ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಶಿಬಿರದಲ್ಲಿ 105 ಮಂದಿ ಮಧುಮೇಹ ತಪಾಸಣೆ ಮಾಡಿಸಿಕೊಂಡರು.

ಈ ವೇಳೆ ಲಯನ್ಸ್ ಕ್ಲಬ್ ನ ಜಿಲ್ಲಾ ಸದಸ್ಯ ವಿಜಯಕುಮಾರ್, ಲಯನ್ ರಾಜಶೇಖರ್, ನಾಗರತ್ನಮ್ಮ, ನಾಗರಾಜು, ಸಿ.ಎನ್. ರಾಜಶೇಖರ್, ಕವಿತಾ ರಾಜಶೇಖರ್, ಕೆ.ಪಿ.ಲಕ್ಷ್ಮೀ ನಾರಾಯಣ್, ರಮಾಕಾಂತ್, ಆರ್.ಎಸ್. ಮಂಜುನಾಥ್, ವೇಣುಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *