Categories: ಲೇಖನ

ದೇಶ, ರಾಜ್ಯದಲ್ಲಿ ಚರ್ಚೆಯಾಗಬೇಕಾದ ವಿಷಯಗಳು…….

ಯಾವುದು ಮುಖ್ಯ – ಯಾವುದು ತಪ್ಪು ದಾರಿ……..

ಆಗಬೇಕಾದ ಕೆಲಸಗಳು – ನಾವು ಸದಾ ಚರ್ಚಿಸುತ್ತಿರುವ ವಿಷಯಗಳು…….

ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು…….

1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ…….

2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸರ ರಕ್ಷಣೆ….

3) ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಕಾರಣ ಅಭಿವೃದ್ಧಿಯ ಅಸಮರ್ಪಕ ನಿರ್ವಹಣೆ….

4) ಚುನಾವಣಾ ರಾಜಕೀಯದ ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆ ದ್ವೇಷ ಅಸೂಯೆಗಳ ಗೂಡಾಗಿ ಮನಸ್ಸುಗಳು ಒಡೆಯುತ್ತಿವೆ. ಅದನ್ನು ಒಂದುಗೂಡಿಸುವ ಪ್ರಯತ್ನ ಆಗಬೇಕಿದೆ….

5) ಜಾತಿ ಪದ್ದತಿಯ ನಿರ್ಮೂಲನೆಗೆ ಸಣ್ಣ ಪ್ರಮಾಣದ ಪ್ರಯತ್ನಗಳಾದರು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ…..

6) ಭಾರತೀಯ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಹಿಂಸಾತ್ಮಕ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕಿದೆ….

7) ಅರ್ಹತೆಗೆ ತಕ್ಕಂತ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿ ಹೊಟ್ಟೆಪಾಡಿನ ಉದ್ಯೋಗಗಳೇ ಹೆಚ್ಚಾಗುತ್ತಿರುವುದು ನಿರುದ್ಯೋಗ ಹೆಚ್ಚಾಗಲು ಕಾರಣವಾಗಿ ಭವಿಷ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ತಡೆಯಲು ಈಗಿನಿಂದಲೇ ಪ್ರಯತ್ನಿಸಬೇಕಿದೆ….

8) ರೈತರ ಆತ್ಮಹತ್ಯೆ ಮತ್ತು ಕೃಷಿ ದಿನೇ ದಿನೇ ಶೋಚನೀಯ ಸ್ಥಿತಿ ತಲುಪುತ್ತಿದೆ. ಅದಕ್ಕೆ ಪರಿಹಾರವನ್ನು ಯುದ್ದೋಪಾದಿಯಲ್ಲಿ ಪರಿಹರಿಸಬೇಕಾಗಿದೆ….

9) ಆಹಾರದ ಕಲಬೆರಕೆ ಭಾರತೀಯರ ಆಯಸ್ಸನ್ನೇ ಕಡಿಮೆ ಮಾಡುತ್ತಿದೆ. ಅದಕ್ಕೆ ಆದಷ್ಟು ಬೇಗ ಕ್ರಮಗಳನ್ನು ಕೈಗೊಳ್ಳಬೇಕಿದೆ….

10) ಮಾದಕ ವಸ್ತುಗಳ ನಿಯಂತ್ರಣ ಮತ್ತು ಆನ್ ಲೈನ್ ಜೂಜು ಕೇಂದ್ರಗಳ ನಿಷೇಧ ಹೇರದಿದ್ದರೆ ಯುವ ಸಮೂಹ ಸಂಪೂರ್ಣ ನಾಶವಾಗುತ್ತದೆ. ಅದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ…..

ಆದರೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕಾರಣಿಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು, ಹೋರಾಟಗಾರರು ಚರ್ಚೆ ಮಾಡುತ್ತಿರುವ ವಿಷಯಗಳು ಬೇರೆಯೇ ಇದೆ……

1) ಮುಂದಿನ ಯಾವುದೇ ಚುನಾವಣೆಯನ್ನು ಯಾವ ಯಾವ ತಂತ್ರಗಳನ್ನು ಉಪಯೋಗಿಸಿ ಗೆಲ್ಲಬೇಕು ಎಂಬುದೇ ಬಹುಮುಖ್ಯ ಚರ್ಚೆಯ ವಿಷಯವಾಗಿದೆ…..

2) ಅಧಿಕಾರ ಪಡೆಯಲು ಯಾವ ರೀತಿಯ ಭಿನ್ನಮತೀಯ ಚಟುವಟಿಕೆ ಮಾಡಬೇಕು, ಯಾವ ಪಕ್ಷಕ್ಕೆ ಯಾರು ಹಾರಬೇಕು, ಯಾವುದು ಹೆಚ್ಚು ಲಾಭ ಇದೇ ಮಾತುಕತೆಗಳು…..

3) ಯಾವ ಯಾವ ಯೋಜನೆಗಳ ಮೂಲಕ ಮತದಾರರನ್ನು ಯಾವ ರೀತಿ ಆಕರ್ಷಿಸಬೇಕು ಅಥವಾ ಭ್ರಮೆಗೆ ಒಳಪಡಿಸಬೇಕು…..

4) ಜಾತಿ ಜನಗಣತಿಯ ವಿಷಯವನ್ನು ಹೇಗೆ ಚುನಾವಣಾ ತಂತ್ರವಾಗಿ ಲಾಭ ಮಾಡಿಕೊಳ್ಳಬೇಕು……

5) ಹಿಂದೂ ಮುಸ್ಲಿಂ ಮತದಾರರನ್ನು ಯಾವ ರೀತಿಯಲ್ಲಿ ವಿಭಜಿಸಿ ಅದನ್ನೇ ಪ್ರಮುಖ ಅಸ್ತ್ರವಾಗಿ ಅಧಿಕಾರ ಹಿಡಿಯಬಹುದು….

6) ಎಡಪಂಥೀಯ ಮತ್ತು ಬಲಪಂಥೀಯ ವಿಚಾರಗಳ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಂಡು ಅನವಶ್ಯಕವಾಗಿ ಚರ್ಚಿಸುತ್ತಾ ಕಾಲ ಕಳೆಯುವುದು……

7) ಆರ್ಯ – ದ್ರಾವಿಡ ಸಂಸ್ಕೃತಿಗಳ ಆಧಾರದ ಮೇಲೆ ವಿಭಜನಾತ್ಮಕ ಮನಸ್ಥಿತಿಯನ್ನು ಜನರಲ್ಲಿ ಬಿತ್ತುವುದು…..

8) ನೀರು – ಭಾಷೆಯ ವಿವಾದಗಳನ್ನು ಸದಾ ಚರ್ಚಿಸುತ್ತ ಅದನ್ನು ವಿವಾದವಾಗಿ ಸದಾ ಜೀವಂತ ಇಡುವುದು…..

9) ಟೋಲ್, ಪೆಟ್ರೋಲ್, ಗ್ಯಾಸ್, ಜಿಎಸ್ಟಿ, ಆಹಾರ ಪದಾರ್ಥಗಳು ಮುಂತಾದ ಬೆಲೆಗಳನ್ನು ಏರಿಸುತ್ತಾ ಒಮ್ಮೊಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಸುತ್ತಾ ಜನರಲ್ಲಿ ಅದರ ಬಗ್ಗೆಯೇ ಯೋಚಿಸುವಂತೆ ಮಾಡುವುದು..‌.‌..‌

10) ನಿರುದ್ಯೋಗ ನಿವಾರಣೆಯ ಭರವಸೆ, ವಿದೇಶದಿಂದ ಕಪ್ಪು ಹಣದ ತರುವ ಆಶ್ವಾಸನೆ ಹೀಗೆ ಮತ್ತೆ ಮತ್ತೆ ಅದೇ ವಿಷಯಗಳ ಪ್ರಸ್ತಾಪ……

ಹೀಗೆ ಜನರ ಮೂಲಭೂತ ಅವಶ್ಯಕತೆಗಳೇ ಬೇರೆ. ಜನಸಾಮಾನ್ಯರು ಸೇರಿ ಎಲ್ಲರೂ ಚರ್ಚಿಸುವ ವಿಷಯಗಳೇ ಬೇರೆ……

ಒಟ್ಟಿನಲ್ಲಿ ಇಡೀ ದೇಶ ರಾಜಕಾರಣಿಗಳ ಅಧಿಕಾರ ದಾಹದ ಸುತ್ತಲೇ ಸುತ್ತುತ್ತ ಪ್ರಜಾಪ್ರಭುತ್ವ ಪರೋಕ್ಷವಾಗಿ ರಾಜಪ್ರಭುತ್ವದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವಂತಿದೆ. ಜಾಗೃತರಾಗಬೇಕಾದವರು ಕಾರ್ಪೊರೇಟ್ ಸಂಸ್ಥೆಗಳ ತಂತ್ರಗಾರಿಕೆಗೆ ಬಲಿಯಾಗಿ ಅವರ ಗುಲಾಮರಾಗಿಯೇ ತಮಗರಿವಿಲ್ಲದೆ ಬಂಧಿಯಾಗಿದ್ದಾರೆ…..

ಏಳು ಸುತ್ತಿನ ಕೋಟೆಯ ಒಳಗೆ ನುಗ್ಗುವ ಕೆಲಸವನ್ನು ಪ್ರಜ್ಞಾವಂತರು ಮಾಡಬೇಕಿದೆ. ಅದು ಕಷ್ಟದ ಕೆಲಸವಾದರು ಅಸಾಧ್ಯವಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭೂ ಮಾಪನ ಕಾರ್ಯ ಸ್ಥಗಿತ, ರೈತರ ಆಕ್ರೋಶ: ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…

10 minutes ago

ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆ ಜಾರಿ- ಬಿಜೆಪಿ ರಾಜ್ಯ ವಕ್ತಾರರಾದ ಅಶ್ವಿನಿ ಶಂಕರ್

ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…

1 hour ago

ಆಶಾ ಭೋಸ್ಲೆ…..ಸುಮಾರು 12000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದವರು- ಅವರಿಗೆ ‌ಭಾವಪೂರ್ಣ ಶ್ರದ್ಧಾಂಜಲಿ……

ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…

11 hours ago

Документ_9

Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…

15 hours ago

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ- ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…

22 hours ago

ಹೆಣ್ಣಿನ‌ ಹಿತರಕ್ಷಣೆಗಾಗಿ ಮಹಿಳಾ ಪೊಲೀಸ್ ಠಾಣೆ ಸದಾ ಸನ್ನದ್ಧ- ಮಹಿಳಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪಂಕಜಾ

ಹೆಣ್ಣಿನ‌ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…

1 day ago