ದೇವಸ್ಥಾನ ಸನ್ನಿಧಿಯಲ್ಲಿ ರಾಜಕಾರಣ ಬೇಡ, ಮಾತನಾಡುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಂತರ ಜಾತಿಗಣತಿ ಬಹಿರಂಗ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಹೇಳಿದ್ದಾರೆ ನಾನು ಇನ್ನೂ ವರದಿ ನೋಡಿಲ್ಲ. ನಾನು ನಿನ್ನೆ ಬೆಳಗಾವಿ, ಮಂಗಳೂರಿಗೆ ಹೋಗಿದ್ದೆ. ನೋಡ್ತೀವಿ ಅದು ಇನ್ನೂ ನಮ್ಮ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಬೇಕು. ಸಿಎಂ ಸದನದಲ್ಲಿ ಚರ್ಚೆ ಮಾಡ್ತೀವಿ ಅಂತಾ ಹೇಳಿದ್ದಾರೆ. ಆತುರದ ನಿರ್ಧಾರ ಯಾರು ತೆಗೆದುಕೊಳ್ಳುವುದಿಲ್ಲ. ಕೆಲವು ರಾಜಕಾರಣಿಗಳು ಸ್ಟೇಟ್ಮೆಂಟ್ ಮಾಡಬೇಕು ಮಾಡ್ತಾರೆ. ಸತ್ಯಾಂಶ ತಿಳಿದುಕೊಂಡು ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಕೆಲಸ ಮಾಡ್ತೇವೆ ಎಂದರು.
ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥಾನ ಪ್ರಸಿದ್ಧ, ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯವಾಗಿದೆ. ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದರು.
ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸವಿರುವ ಘಾಟಿ ಸುಬ್ರಹ್ಮಣ್ಯ ಬಹಳ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರ, ನನ್ನ ಕಷ್ಟದ ದಿನಗಳಲ್ಲಿ ನನ್ನ ಸ್ನೇಹಿತರು ಸುಬ್ರಹ್ಮಣ್ಯಸ್ವಾಮಿಗೆ ಪ್ರಾರ್ಥನೆ ಮಾಡಿದ್ರು, ಪ್ರಾರ್ಥನೆಗೆ ಫಲ ಸಿಕ್ಕಿದೆ, ಬಹಳ ದಿನಗಳಿಂದ ಇಲ್ಲಿಗೆ ಬರಬೇಕೆಂದು ಕೊಂಡಿದೆ, ಆದರೆ ಸಾಧ್ಯವಾಗಿರಲಲ್ಲಿ, ಇವತ್ತು ಬಂದೇ ಬರಬೇಕೆಂದು ತಿರ್ಮಾನ ಮಾಡಿದೆ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಬಹಳ ಸಂತೋಷ ತಂದಿದೆ ಎಂದರು.