
ಎಲ್ಲರೂ ಒಂದು ಕಡೆ ಸೇರಿ ಆಚರಿಸುವ ಈ ರೀತಿಯ ದೇವರ ಕಾರ್ಯಕ್ರಮಗಳು ಸದಾ ಕಾಲ ನಡೆಯುತ್ತಲೇ ಇರಬೇಕು. ಇಂತಹ ಭಕ್ತಿ ಕಾರ್ಯಕ್ರಮಗಳು ಸೌಹಾರ್ದತೆ, ಮನಸ್ಸಿಗೆ ಶಾಂತಿ, ನೆಮ್ಮದಿ ವಾತಾವರಣ ನೆಲೆಸಲು ಸಹಕಾರಿ ಆಗುತ್ತದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ನಗರದ ರಾಜೀವ್ ಗಾಂಧಿ ಬಡಾವಣೆ 2ನೇ ಹಂತ ಹಾಗೂ ಗಂಗಾಧರಪುರ ಲೇಔಟ್ ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಮುತ್ಯಾಲಮ್ಮ, ಶ್ರೀ ಕಾಳಮ್ಮ, ಶ್ರೀ ದೊಡ್ಡಮ್ಮ ದೇವಿಯರ 3 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಮುತ್ಯಾಲಮ್ಮ, ಶ್ರೀ ಕಾಳಮ್ಮ, ಶ್ರೀ ದೊಡ್ಡಮ್ಮ ದೇವಿಯರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಸಕಾಲಕ್ಕೆ ಮಳೆ, ಬೆಳೆಯಾಗಿ ಜನರು ನೆಮ್ಮದಿಯಿಂದ ಬದಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಜೆಡಿಎಸ್ ಮುಖಂಡ ಪ್ರವೀಣ್ ಮಾತನಾಡಿ, ಹೆಚ್ಚು ಬಡವರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನೇಕಾರರು ವಾಸಿಸುತ್ತಿರುವ ಈ ಭಾಗದಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆ, ಚರಂಡಿ ದುರಸ್ತಿ, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು ಸೇರಿದಂತೆ ನಗರಸಭೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಈ ಭಾಗಕ್ಕೆ ಹೆಚ್ಚು ದೊರಕಲಿ ಹಾಗೂ ಈ ಭಾಗದಲ್ಲಿ ಕಾರ್ಮಿಕ ವರ್ಗದವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಸ್ಸಿನ ಸೌಕರ್ಯ ಆಗಬೇಕು ಎಂದು ಒತ್ತಾಯಿಸಿದರು…
ಈ ಸಂದರ್ಭದಲ್ಲಿ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಪ್ರಮೀಳಾ ಮಹದೇವ್, ಮಾಜಿ ನಾಮಿನಿ ನಗರ ಸಭಾ ಸದಸ್ಯರು ತಳಗವಾರ ನಾಗರಾಜ್, ದೊಡ್ಡತುಮಕುರು ಪ್ರಭಾಕರ್, ಹಾದ್ರಿಪುರ ಮಹೇಶ್, ಸಂಜೀವ, ಹರ್ಷ, ಕೇಶವ ಮೂರ್ತಿ ಪ್ರಧಾನಿ, ಮಂಜು, ಗೌರಮ್ಮ ಸೇರಿದಂತೆ ಶ್ರೀ ಮುತ್ಯಾಲಮ್ಮ, ಶ್ರೀ ಕಾಳಮ್ಮ, ಶ್ರೀ ದೊಡ್ಡಮ್ಮ ದೇವಿಯರ ಹಲವು ಮುಖಂಡರು ಭಾಗಿಯಾಗಿದ್ದರು…