“ದೇವರ ಆಟ ಬಲ್ಲವರಾರು” ಸಿನಿಮಾದ ಸೆಟ್ ವರ್ಕ್ ಭರ್ಜರಿಯಾಗಿ ಆರಂಭವಾಗಿದ್ದು ಗಿನ್ನಿಸ್ ರೆಕಾರ್ಡ್ ಪ್ರಕ್ರಿಯೆಗೆ ನಿರ್ದೇಶಕ ಜನಾರ್ಧನ್ ಪಿ ಜಾನಿ ಸಹಿ ಹಾಕಿದ್ದಾರೆ.
ಗಿನ್ನಿಸ್ ನ ಮೊದಲ ಪ್ರಕ್ರಿಯ ಹಂತ ಜೂನ್ 19 ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಜೂನ್ 20 ರಾತ್ರಿ 10 ಗಂಟೆವರೆಗೆ ಗಿನ್ನಿಸ್ ನ ಮೊದಲ ಪ್ರಕ್ರಿಯೆ 36 ಗಂಟೆಗಳಲ್ಲಿ ಸೆಟ್ ವರ್ಕ್ ಮುಗಿಯಬೇಕಿದೆ ಎಂದು ತಿಳಿದುಬಂದಿದೆ.
170 ಜನಗಳನ್ನು ಒಳಗೊಂಡ ಆರ್ಟ್ ತಂಡ ಸೆಟ್ ತಯಾರಿಯಲ್ಲಿದ್ದು ಚೆನ್ನೈನ ನ್ಯಾಷನಲ್ ಅವಾರ್ಡ್ ವಿನ್ನರ್ ಗ್ರೇಟ್ ಹಾರ್ಟ್ ಡೈರೆಕ್ಟೆಡ್ “ಪರದೇಶಿ” ಸಿನಿಮಾ ಖ್ಯಾತಿಯ ಬಾಲಚಂದ್ರನ್ ಇದರ ಸೆಟ ವರ್ಕ್ ಮಾಡುತ್ತಿದ್ದಾರೆ.
1975 ರ ಕಾಲಘಟ್ಟದ ಕಥೆ ಹೇಳುವ ಸಿನಿಮಾ ಆಗಿದ್ದರಿಂದ ಅದಕ್ಕೆ ತಕ್ಕಂತೆ ಸೆಟ್ ವರ್ಕ್ ಆರಂಭವಾಗಿದ್ದು 150×80 ಅಡಿ ಉದ್ದ &ಅಗಲ 19 ಅಡಿ ಎತ್ತರದ ವಿಸ್ತೀರ್ಣದಲ್ಲಿ ಸೆಟ್ ತಯಾರಗಲಿದೆ.