
ಬಡವರ ಬಂಧು, ಪೃತ್ವಿ ವಲ್ಲಭ ಎಂದೇ ಪ್ರಸಿದ್ಧಿ ಹೊಂದಿರುವ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ದೇವನಹಳ್ಳಿ ತಾಲ್ಲೂಕಿನ ಹಿಂದುಳಿದ ವರ್ಗಗಳ ನಾಯಕರು ಸಜ್ಜಾಗಿದ್ದಾರೆ.
ಇದೇ ಬುಧವಾರ ನಡೆಯಲಿರುವ ಜನ್ಮ ದಿನಾಚರಣೆಯಲ್ಲಿ ಅರಸು ಅವರ ಭಾವಚಿತ್ರವನ್ನು ದೇವನಹಳ್ಳಿ ಪ್ರವಾಸಿ ಮಂದಿರದಿಂದ ಪಟ್ಟಣದಲ್ಲಿರುವ ದೇವರಾಜು ಅರಸು ಭವನದವರೆಗೆ ಮೆರವಣಿಗೆ ನಡೆಯಲಿದೆ.
ಸಂಭ್ರಮದಲ್ಲಿ ಕಲಾ ತಂಡಗಳಿಂದ ಮೆರಗು ಹೆಚ್ಚಲಿದೆ. ಇನ್ನು ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಅಧಿಕಾರಗಳು, ಸಮುದಾಯದ ಹಿರಿಯ ನಾಯಕರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಒಬಿಸಿ ನಾಯಕ ಬಿ.ಕೆ.ನಾರಾಯಣಸ್ವಾಮಿ ಹೇಳಿದರು.